ಸುದ್ದಿ ಸಂಕ್ಷಿಪ್ತ

ಸುತ್ತೂರು ಜಾತ್ರೆ ‘ಉಚಿತ ಸಾಮೂಹಿಕ ವಿವಾಹ’ : ಅರ್ಜಿ ಆಹ್ವಾನ

ಮೈಸೂರು,ಡಿ.21 : ಮುಂದಿನ ವರ್ಷ ಫೆ.1 ರಿಂದ 6ರವರೆಗೆ ಸುತ್ತೂರು ಕ್ಷೇತ್ರದಲ್ಲಿ ಜರುಗಲಿರುವ ಶ್ರೀಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.2ರ ಶನಿವಾರದಂದು ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ವಧುವಿಗೆ ಮಾಂಗಲ್ಯ, ಸೀರೆ, ಕಾಲುಂಗುರವನ್ನು, ವರನಿಗೆ ಪಂಚೆ, ವಲ್ಲಿ ಶರ್ಟ್ ನೀಡಲಾಗುವುದು. ಸಮಾಜದ ಎಲ್ಲಾ ವರ್ಗದವರಿಗೂ ಮುಕ್ತ ಅವಕಾಶವಿದೆ. ಆಸಕ್ತರು ಜನವರಿ 15ರೊಳಗೆ ದಾಖಲೆಗಳ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ವಿವರಗಳಿಗೆ ದೂ.ಸಂ 0821 -2548212-122, 94486 74702 ಸಂಪರ್ಕಿಸಬಹುದೆಂದು ಸಂಚಾಲಕ ಆರ್.ಕುಮಾರಸ್ವಾಮಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: