ಮೈಸೂರು

ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವನೆ ದುರಂತ ಪ್ರಕರಣ : ಆರೋಪಿಗಳು ಮೈಸೂರು ಜೈಲಿಗೆ

ಮೈಸೂರು,ಡಿ.22:- ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವನೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇಮ್ಮಡಿ ಮಹದೇವಸ್ವಾಮಿ, ಮಾದೇಶ, ದೊಡ್ಡಯ್ಯ,ಅಂಬಿಕಾ  ಬಂಧಿತರಾಗಿದ್ದು, ಇವರನ್ನು ಮೈಸೂರು ಜೈಲಿಗೆ ಕರೆದೊಯ್ಯಲಾಗಿದೆ. ಕರೆದೊಯ್ದ ಪೊಲೀಸರು ನಾಲ್ಕು ದಿನಗಳ  ಕಾಲಾವಕಾಶ ಕೇಳಿದ್ದರು. ಆದರೆ  ರಾತ್ರಿ ಮೂರು ಗಂಟೆಯ ಸಮಯದಲ್ಲಿ  ನ್ಯಾಯಾಧೀಶರ ಮನೆಗೆ  ಹಾಜರುಪಡಿಸಿದ್ದಾರೆ. ಒಂದು ದಿನ ಮೊದಲೇ ವಿಚಾರಣೆ ಮುಗಿದಿದೆಯೆಂದು ನ್ಯಾಯಾಧೀಶರ ಮುಂದೆ ಮಧ್ಯ ರಾತ್ರಿಯೇ ಹಾಜರು ಪಡಿಸಿದ್ದಾರೆ. ನಂತರ ಮೈಸೂರು ಜೈಲಿಗೆ ಆರೋಪಿಗಳನ್ನು ಕರೆತರಲಾಗಿದೆ. ಗಲಾಟೆಗಳು ನಡೆಯಬಾರದು ಎನ್ನುವ ಉದ್ದೇಶದಿಂದ ರಾತ್ರೋರಾತ್ರಿ ಮೈಸೂರು ಜೈಲಿಗೆ ಕರೆತರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: