ಮೈಸೂರು

ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ : ರೌಡಿ ಪರೇಡ್ ; ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ಕಿವಿಮಾತು

ಮೈಸೂರು,ಡಿ.22:- ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ಸಿಆರ್ ಮೈದಾನದಲ್ಲಿಂದು ದೇವರಾಜ ವಿಭಾಗ ಪೊಲೀಸರು ರೌಡಿ ಪರೇಡ್ ನಡೆಸಿದರು.

ಪರೇಡ್ ನಲ್ಲಿ ವಿವಿಧ ಕಳ್ಳತನ ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಸೂಕ್ತ ದಾಖಲೆ‌ ಸಂಗ್ರಹಿಸಿ ಅವರ ವೃತ್ತಿಯ ಬಗ್ಗೆ ಮಾಹಿತಿ ಕಲೆ‌ಹಾಕಿದರು. ಪ್ರತಿ ಠಾಣೆಯ ಸರಹದ್ದಿನಲ್ಲಿಯೂ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರತಿವರ್ಷ ದಂತೆ ಈ ವರ್ಷವು ಕೂಡ ಮುಂದುವರಿಸಿಕೊಂಡು ಹೋಗಲಾಗಿದೆ ಎಂದು ದೇವರಾಜ ಪೊಲೀಸ್ ಠಾಣಾ ಎಸಿಪಿ ಗಜೇಂದ್ರ ಪ್ರಸಾದ್ ಹೇಳಿದರು.  ಇದೇ ವೇಳೆ ರೌಡಿಗಳಿಗೆ ಕಳ್ಳತನ ಕೃತ್ಯಗಳಲ್ಲಿ ಗುರುತಿಸಿಕೊಂಡಿರುವವವರಿಗೆ ಮುಂದೆ ಈ ರೀತಿ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಬೇಡಿ. ತೊಡಗಿಸಿಕೊಂಡಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಪ್ರಯತ್ನಿಸಿ. ನಿಮ್ಮಲ್ಲಿನ ಗುಣಗಳನ್ನು ತ್ಯಜಿಸಿ ಒಳ್ಳೆಯಗುಣಗಳನ್ನು ಅಳವಡಿಸಿಕೊಳ್ಳಿ. ಇಲ್ಲದಿದ್ದಲ್ಲಿ ಕಳ್ಳತನ ಕೃತ್ಯಗಳು ನಡೆದಲ್ಲಿ ನಿಮ್ಮನ್ನೇ ಹಿಡಿದು ತಂದು ವಿಚಾರಣೆ ನಡೆಸಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ಪೊಲೀಸ್ ಸಿಬ್ಬಂದಿಗಳು ಈ ಸಮದರ್ಭ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: