ಮೈಸೂರು

‘ಪರಸನ್ನನ ವಚನ ಶತಕಗಳು’ ಕೃತಿ ಬಿಡುಗಡೆ; ಜ.11ಕ್ಕೆ

‘ಪರಸನ್ನನ ವಚನ ಶತಕಗಳು’ ಕೃತಿ ಬಿಡುಗಡೆ ಹಾಗೂ ವಚನಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಲೇಖಕ ಪ್ರಸನ್ನ ಹೆಗಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೋಮವಾರ ಪತ್ರಕರ್ತರ ಭವನದಲ್ಲಿ ಮಾತನಾಡಿ, ಜ.11ರ ಬುಧವಾರ ಸಂಜೆ 5ಕ್ಕೆ ಅರಮನೆ ಉತ್ತರ ದ್ವಾರದಲ್ಲಿರುವ ಕ.ಸಾ.ಪ. ಕಚೇರಿ ಸಭಾಂಗಣದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನವರ್ಧಿನಿ ಎಜುಕೇಷನಲ್ ಟ್ರಸ್ಟ್ – ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆಯುವ ಕಾರ್ಯಕ್ರಮಲ್ಲಿ ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಅವರು ಕೃತಿ ಬಿಡುಗಡೆಗೊಳಿಸುವರು. ಕವಯಿತ್ರಿ ಡಾ.ಲತಾರಾಜಶೇಖರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕ.ಸಾ.ಪ ಅಧ್ಯಕ್ಷ ಎಂ.ಚಂದ್ರಶೇಖರ್ ಭಾಗವಹಿಸುವರು ಎಂದು ತಿಳಿಸಿದರು. ವಚನ ಸಾಹಿತ್ಯಕ್ಕೆ ತನ್ನದೇ ಆದ ಹಿರಿಮೆ ಮತ್ತು ಘನತೆ ಇದ್ದು ಇಡೀ ಗ್ರಂಥದಲ್ಲಿರುವ ವಿಷಯ ವಸ್ತುವನ್ನು ವಚನದಲ್ಲಿ ಅದ್ಭುತವಾಗಿ ತಿಳಿಸಿಕೊಡುತ್ತವೆ.  ವಚನಗಳು ವ್ಯಕ್ತಿತ್ವಕ್ಕೆ ಪ್ರಭಾವ ಬೀರಿ ಸನ್ನಡೆತೆಗೆ ಪ್ರೇರೇಪಿಸುವುದರ ಮೂಲಕ ಜೀವನದಲ್ಲಿ ಶ್ರೇಷ್ಠತೆ ಅಳವಡಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿ.ಎನ್.ಪ್ರಕಾಶ್ ಹಾಗೂ ಜ್ಞಾನವರ್ಧಿನಿ ಭಾನುಶ್ರೀ ಎ.ಎಲ್ ಉಪಸ್ಥಿತರಿದ್ದರು.

Leave a Reply

comments

Related Articles

error: