ಮೈಸೂರು

ವಿಲ್‍ಪವರ್ ಮಾದರಿ ವ್ಯಾಯಾಮ; ಜ.15ಕ್ಕೆ

ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅವಶ್ಯವಿದ್ದು ಬರಿಗಾಲಿನಿಂದ ಮಾಡುವ ‘ವಿಲ್ ಪವರ್’ ಮಾದರಿ ವ್ಯಾಯಾಮವು ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿ. ಈ ತರಬೇತಿಯನ್ನು ಮೈಸೂರಿನಲ್ಲಿ ಮೊಟ್ಟಮೊದಲ ಬಾರಿಗೆ ಆಯೋಜಿಸಲಾಗಿದೆ ಎಂದು “ದ ನೆಕ್ಸ್ಟ್ ಸ್ಟೆಪ್ ಸಿಂಥಿಯಾ”ಸ್ ನೃತ್ಯಶಾಲೆಯ ಅಭಿಜಿತ್ ಆರ್. ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜ.15ರಂದು ಬೆಳಿಗ್ಗೆ 9 ರಿಂದ ವಿಜಯನಗರದಲ್ಲಿರುವ “ದ ನೆಕ್ಸ್ಟ್ ಸ್ಟೆಪ್ ಸಿಂಥಿಯಾ”ಸ್ ನೃತ್ಯಶಾಲೆಯಲ್ಲಿ ಅಂತಾರಾಷ್ಟ್ರೀಯ ತರಬೇತುಗಾರ್ತಿ  ಹಾಗೂ ವಿಲ್’ಪವರ್ ಮಾದರಿಯ ಸಂಯೋಜಕಿ ಸ್ಟೇಸಿ ಲೀ ತರಬೇತಿ ನೀಡುವರು. ತರಬೇತುದಾರರಿಗೆ, ಶಿಕ್ಷಕರಿಗೆ ಹಾಗೂ ದೈಹಿಕ ಮಾರ್ಗದರ್ಶಕರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತರಬೇತುಗಾರ್ತಿ ಸ್ಟೇಸಿ ಲೀ ಪ್ರಾಯೋಗಿಕವಾಗಿ ವ್ಯಾಯಾಮದ ಮಾದರಿಯನ್ನು ಪ್ರದರ್ಶಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ.9663120499 ಅನ್ನು ಸಂಪರ್ಕಿಬಹುದು.

Leave a Reply

comments

Related Articles

error: