ಸುದ್ದಿ ಸಂಕ್ಷಿಪ್ತ

ಹೃದಯ -ಕಣ್ಣಿನ ಉಚಿತ ತಪಾಸಣಾ ಶಿಬಿರ .25.

ಮೈಸೂರು,ಡಿ.22 : ಮೈಸೂರು ವೀರಶೈವ ಸಜ್ಜನ ಸಂಘ, ಎನ್.ಜೆ.ಎಸ್.ಚಾರಿಟಬಲ್ ಟ್ರಸ್ಟ್ ವತಿಯಿಂದ ಹೃದಯ ಮತ್ತು ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಡಿ.25ರ ಬೆಳಗ್ಗೆ 9.30 ಗಂಟೆಯಿಂದ ಕಬೀರ್ ರಸ್ತೆಯ ಕಂಠಿ ಮಲ್ಲಣ್ಣನವರ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದೆ.

ಜೆಎಸ್ಎಸ್ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ನಡೆಸಲಿದ್ದಾರೆ ಎಂದು ಸಂಘವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: