ಮೈಸೂರು

ಐಕ್ವೆಸ್ಟ್’ನಿಂದ ಪದವೀಧರರಿಗಾಗಿ ಉದ್ಯೋಗವರ್ಧಕ ತರಬೇತಿ

ಮೈಸೂರಿನ ಐಕ್ವೆಸ್ಟ್’ನಿಂದ ಎಂಜಿನಿಯರಿಂಗ್ ಹಾಗೂ ಇತರೆ ಪದವೀಧರರಿಗೆ ಉದ್ಯೋಗವರ್ಧಕ ತರಬೇತಿಯನ್ನು ನೀಡುತ್ತಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಸಂಸ್ಥೆಯು ಒದಗಿಸುತ್ತಿದೆ ಎಂದು ಸಂಸ್ಥಾಪಕ ಕಾರ್ಯನಿರ್ವಾಹಕ ಕೆ.ಎಸ್. ಮಂಜುನಾಥ್ ತಿಳಿಸಿದರು.

ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 213 ಎಂಜಿನಿಯರಿಂಗ್ ಕಾಲೇಜುಗಳಿಂದ 70 ಸಾವಿರ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಇಂದು ಸೀಟ್ ಪಡೆಯುತ್ತಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯ ಹಾಗೂ ತರಬೇತಿಯ ಕೊರತೆ ಉಂಟಾಗಿದೆ. ಕನಸಿನಂತೆ ಅವಕಾಶಗಳು ದೊರೆಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಬಿ.ಇ, ಬಿ.ಟೆಕ್, ಎಂ.ಇ. ಹಾಗೂ ಇತರೆ ಸ್ನಾತಕ ಪದವಿಧರರಿಗೆ ಉತ್ತಮ ಕೌಶಲ್ಯಾಧಾರಿತ ತರಬೇತಿಯೂ ಅಥವಾ ವೃತ್ತಿಪರ ಕುಶಲತೆಯೂ ವಿಶ್ವವಿದ್ಯಾಲಯಗಳಲ್ಲಿ ದೊರೆಯುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಳಿಸಲು ವಿದ್ಯಾರ್ಥಿಗಳು ಸಾಕಷ್ಟು ಶ್ರಮಿಸಬೇಕಾಗಿದ್ದು ಅಂತಾರಾಷ್ಟ್ರೀಯ ಕಂಪನಿಗಳು ಸಾಂಪ್ರದಾಯಿಕ ಪದ್ಧತಿಗಿಂತ ಅಟೋಮೊಷನ್ ಕೌಶಲ್ಯವನ್ನು ಹೊಂದಿರುವವರಿಗೆ ಹೆಚ್ಚಿನ ಪ್ರಧಾನ್ಯತೆ ನೀಡುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಹಲವಾರು ಕೋರ್ಸ್‍ಗಳ ತರಬೇತಿ ನೀಡಿ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಲು ಪ್ರೇರಕವಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ದೇಶದ ಐಟಿ ಕಂಪನಿಗಳು 2020 ರ ವೇಳೆಗೆ ಸುಮಾರು 40 ಬಿಲಿಯನ್ ವಹಿವಾಟು ನಡೆಸಲಿದ್ದು, ವಿಫುಲ ಅವಕಾಶಗಳು ಒದಗಲಿವೆ. ಕಂಪನಿಗಳ ನಿರೀಕ್ಷೆಗೆ ತಕ್ಕಂತೆ ಕೌಶಲ್ಯ ವೃದ್ಧಿಸಿಕೊಂಡಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಾಣಬಹುದು ಎಂದರು.

ಇದರೊಟ್ಟಿಗೆ ಸಂಸ್ಥೆಯು ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದು, ಗ್ರಾಮೀಣ ಭಾಗದ ಎಸ್.ಸಿ/ಎಸ್.ಟಿ ವರ್ಗದವರಿಗೆ ಉಚಿತ ಹಾಗೂ ಮಹಿಳಾ ಪದವಿಧರರಿಗೆ ರಿಯಾಯಿತಿ ದರದಲ್ಲಿ ತರಬೇತಿ ನೀಡಲಾಗುತ್ತಿದೆ. ಶೇಕಡ ನೂರಕ್ಕೆ ನೂರು ಉದ್ಯೋಗ ಖಾತ್ರಿಯು ಇದೆ ಎಂದರು.

ಹೆಚ್ಚಿನ ಮಾಹಿತಿಗೆ ಹೆಬ್ಬಾಳು ಕೈಗಾರಿಕಾ ಬಡಾವಣೆ, 331/ಬಿ, ಕೆಐಎಡಿಬಿ ಕೈಗಾರಿಕ ಪ್ರದೇಶ, ಮೊಬೈಲ್ ನಂ : 9686144882, ಇಮೇಲ್ : infoAiquesttechnologies.co.in ಅನ್ನು ಸಂಪರ್ಕಿಸಬಹುದು ಎಂದರು.

Leave a Reply

comments

Related Articles

error: