ಮೈಸೂರು

ಸರ್ಕಾರಿ ಜಮೀನಿಗೆ ಹಾಕಲಾಗಿದ್ದ ತಂತಿಬೇಲಿ ತೆರವು : ಹೈಡ್ರಾಮ ನಡೆಸಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

ಮೈಸೂರು,ಡಿ.24:- ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಜೆಸಿಬಿ ಸದ್ದು ಮಾಡುತ್ತಿದ್ದು, ಸರ್ಕಾರಿ ಜಮೀನಿಗೆ ಹಾಕಲಾಗಿದ್ದ ತಂತಿಬೇಲಿ ತೆರವು ಕಾರ್ಯವನ್ನು ಮೈಸೂರಿನ ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಕುರುಬಾರಹಳ್ಳಿ ಸರ್ವೆ ನಂಬರ್ 4 ರಲ್ಲಿರುವ ಲಲಿತಮಹಲ್ ಹೆಲಿಪ್ಯಾಡ್ ಸಮೀಪ ಕೆ.ಮನು ಎಂಬಾತ ಸರ್ಕಾರಿ ಜಮೀನಿಗೆ ತಂತಿ ಬೇಲಿ ಹಾಕಿದ್ದ. ತಾನು ಜಿಪಿಎ ಹೊಲ್ಡರ್ ಎಂದು ಹೇಳಿಕೊಂಡು ತಂತಿ ಬೇಲಿ ಹಾಕಿದ್ದ. ಆಲನಹಳ್ಳಿ ಇನ್ಸಪೆಕ್ಟರ್ ಮಂಜು ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು, ತೆರವು ಕಾರ್ಯಾಚರಣೆಗೆ ಮನು ಅಡ್ಡಿಪಡಿಸಿದ್ದಾನೆ. ಜೆಸಿಬಿ ಕೆಳಗೆ ಕುಳಿತು ಕಾರ್ಯಾಚರಣೆ ವಿರೋಧಿಸಿ ಹೈಡ್ರಾಮ ನಡೆಸಿದ್ದ. ಸರ್ಕಾರಿ ಜಮೀನಿಗೆ ಬೇಲಿ ಹಾಕಿದ್ದಕ್ಕೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದ ಆರೋಪದ ಮೇರೆಗೆ ಮನುವನ್ನು ಆಲನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 192 a ಕಾನೂನು ಅಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ತಹಶೀಲ್ದಾರ್ ರಮೇಶ್ ಬಾಬು ಪೊಲೀಸರಿಗೆ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: