ಪ್ರಮುಖ ಸುದ್ದಿಮೈಸೂರು

ಶಬರಿಮಲೆ ಯಥಾಸ್ಥಿತಿಗೆ ‘ಶಬರಿ ಮಲೆ ಉಳಿಸಿ’ : ಜ್ಯೋತಿ ಮೆರವಣಿಗೆ.26.

ಮೈಸೂರು,ಡಿ.24 : ಕೇರಳದ ಶಬರಿಮಲೆ ಕ್ಷೇತ್ರದಲ್ಲಿರುವ ಸನಾತನ ಪರಂಪರೆ ಯಥಾ ಸ್ಥಿತಿಯಲ್ಲಿಯೇ ಮುಂದುವರೆಸಬೇಕೆಂದು ಒತ್ತಾಯಿಸಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿ ವತಿಯಿಂದ ‘ಶಬರಿ ಮಲೆ ಉಳಿಸಿ’ ಎಂಬ ಘೋಷಣಾ ವಾಕ್ಯದಡಿ ಡಿ.26ರ ಸಂಜೆ 5.30ಕ್ಕೆ ಅಯ್ಯಪ್ಪ ಜ್ಯೋತಿ ಮೆರವಣಿಗೆಯನ್ನು ಹಮ್ಮಿಕೊಂಡಿದೆ.

ಬಿ.ಆರ್.ಅಂಬೇಡ್ಕರ್ ರಾಷ್ಟ್ರಿಯ ಪ್ರಚಾರ ಸಮಿತಿ ಅಧ್ಯಕ್ಷ ಚಿ.ನಾ.ರಾಮು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾಸ್ತಿಕರು ಮಾಡಿದ ಮನವಿಗೆ ಸ್ಪಂಧಿಸಿ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಪುನರ್ ಪರಿಶೀಲಿಸಬೇಕಾದ ಅವಶ್ಯಕತೆ ಇದೆ ಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಅಲ್ಲದೇ ಹಿಂದೂ ಪವಿತ್ರ ಕ್ಷೇತ್ರಗಳ ಪರಂಪರೆ ಹಾಗೂ ಸನಾತನ ಸಂಸ್ಕೃತಿಯನ್ನ ಕದಡುವ ನಿಟ್ಟಿನಲ್ಲಿ ಕೆಲವು ಎಡಪಂಥೀಯರು ನಡೆಸಿರುವ ಷಡ್ಯಂತ್ರ ಇದೆಂದು ಕಿಡಿಕಾರಿ, ಮಹಿಳೆಯರ ಬಗ್ಗೆ ಅಪಾರ ಘನತೆ ಗೌರವನ್ನು ಹೊಂದಿದ್ದು ಅವರ ಹಕ್ಕುಗಳನ್ನು ಕಿತ್ತುಕೊಳ್ಳುವುದಿಲ್ಲ ಹಾಗೆಂದು  ಕ್ಷೇತ್ರದ ಪವಿತ್ರತೆಗೆ ಧಕ್ಕೆ ತರುವುದನ್ನು ಬಿಡುವುದಿಲ್ಲ ಎಂದು ಎಚ್ಚರ ನೀಡಿದರು.

ಕ್ಷೇತ್ರದ ಪವಿತ್ರತೆ, ಆಚಾರ ಪದ್ದತಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಂದು ಸಂಜೆ 5.30ಕ್ಕೆ ನಗರದ ಗಾಂಧಿ ಚೌಕದಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಾವಿರಾರು ಜನ ಮಾಲಾಧಾರಿ ಅಯ್ಯಪ್ಪ ಭಕ್ತರು ದೀಪಗಳನ್ನು ಹಿಡಿದು ಮೆರವಣಿಗೆ ಮಾಡಿಲಿದ್ದೇವೆ, ಆ ಸ್ಥಳದಲ್ಲಿ ವೇದಿಕೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿ ಸಂಚಾಲಕರಾದ ಗಿರಿಧರ್, ಗೋವರ್ಧನ್, ಚೇತನ್ ಮಂಜುನಾಥ್, ಹಿಂದೂ ಕಾರ್ಯಕರ್ತ ಗಿರಿಧರ್, ಮನು ಅಯ್ಯಪ್ಪ, ಪ್ರವೀಣ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: