ಮೈಸೂರು

ಅಕ್ರಮ ಮರಳು ಸಾಗಣಿಕೆ ತಡೆಯಲು ಹೋದ ಗ್ರಾಮಲೆಕ್ಕಿಗನ ಹತ್ಯೆಗೆ ಖಂಡನೆ : ಸೂಕ್ತ ಪರಿಹಾರಕ್ಕೆ ಒತ್ತಾಯ

ಮೈಸೂರು,ಡಿ.24:- ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಕರ್ತವ್ಯ ನಿರತರಾಗಿದ್ದ ಗ್ರಾಮಲೆಕ್ಕಿಗ ಸಾಹೇಬ್ ಪಟೇಲ್ ಅಕ್ರಮ ಮರಳು ಸಾಗಣಿಕೆ ತಡೆಯಲು ತೆರಳಿದ ಸಂದರ್ಭ ಸಾಗಣಿಕೆದಾರರು ಅವರ ಕಾಲಿನ ಮೇಲೆ ಲಾರಿ ಹತ್ತಿಸಿ ಕೊಲೆಗೈದಿರುವುದನ್ನು ಮೈಸೂರು ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘ ಖಂಡಿಸಿದೆ. ಅಷ್ಟೇ ಅಲ್ಲದೇ ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅಧ್ಯಕ್ಷ ಬಿ.ಕೆ.ಶ್ರೀನಿವಾಸ್ ಮಾತನಾಡಿ ಅಕ್ರಮವಾಗಿ ಮರಳು ಸಾಗಿಸಲು ಹೋದ ಸಾಹೇಬ್ ಪಾಟೀಲ್ ಅವರ ಮೇಲೆ ಲಾರಿ ಹರಿಸಿ ಕೊಲೆಗೈಯ್ಯಲಾಗಿದೆ. ಈ ಸಾವಿನ ಹಿಂದೆ ಹಲವು ಸಂಶಯಗಳು ಇರುವುದರಿಂದ ಸಿಒಡಿ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಅಕ್ರಮ ಮರಳುಗಣಿಗಾರಿಕೆಯನ್ನು ತಡೆಗಟ್ಟಲು ಹೋದಂತಹ ಸಂದರ್ಭದಲ್ಲಿ ಕಂದಾಯ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಹಲ್ಲೆ ಹಾಗೂ ದೌರ್ಜನ್ಯ ಮಾಡಿರುವ ಅನೇಕ ಪ್ರಕರಣಗಳು ನಡೆದಿವೆ. ಈ ಪ್ರಕರಣದಿಂದ ನೌಕರರು ಅದರಲ್ಲೂ ಕಾರ್ಯನಿರ್ವಾಹಕ ನೌಕರರು ನಿರ್ಭೀತಿಯಿಂದ ಸರ್ಕಾರಿ ಕೆಲಸವನ್ನು ನಿರ್ವಹಿಸಲು ಕಷ್ಟವಾಗಿದೆ. ಅಕ್ರಮ ಮರಳು/ಕಲ್ಲುಗಣಿಗಾರಿಕೆಯನ್ನು ನಿಷೇಧಿಸುವ ಸಮಬಂಧ ನಿಯಮಗಳನ್ನು ರೂಪಿಸಿ ಕಂದಾಯ ಇಲಾಖೆಯ ನೌಕರರನ್ನು ಈ ಕೆಲಸದಿಂದ  ವಿಮುಕ್ತಿಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭ ಗೌರವಾಧ್ಯಕ್ಷ ಪಿ.ಕೆಂಚಯ್ಯ, ಪ್ರಧಾನಕಾರ್ಯದರ್ಶಿ ರವೀಂದ್ರ, ಖಜಾಂಚಿ ಕಿಶೋರ್, ಉಪಾಧ್ಯಕ್ಷ ಎಸ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: