
ಪ್ರಮುಖ ಸುದ್ದಿ
ನಾಲ್ಕು ಕಾಲುಗಳಿರುವ ಕೋಳಿ ಮರಿ ಜನನ!
ರಾಜ್ಯ(ಗದಗ)ಡಿ.24:- ಇದುವರೆಗೂ ಎರಡು ಕಾಲುಗಳಿರೊ ಕೋಳಿಗಳನ್ನು ಎಲ್ಲರೂ ನೋಡಿದ್ದೇವೆ. ಆದರೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೆವಾಡಿ ಗ್ರಾಮದಲ್ಲಿ ನಾಲ್ಕು ಕಾಲುಗಳುಳ್ಳ ಕೋಳಿಮರಿಯೊಂದು ಜನ್ಮ ತಾಳಿದೆ.
ಇದರಿಂದ ಈವರೆಗೂ ಕೇವಲ ಎರಡು ಕಾಲುಗಳುಳ್ಳ ಕೋಳಿಗಳನ್ನು ಕಂಡಿದ್ದ ಬಾಗೇವಾಡಿ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಅವರನ್ನು ನಿಬ್ಬೆರಗಾಗಿಸಿದೆ. ಈ ವಿಚಿತ್ರ ಕೋಳಿಮರಿಯನ್ನು ನೋಡಲಿಕ್ಕೆ ಗುಂಪುಗುಂಪಾಗಿ ಬರುತ್ತಿರುವ ಜನರು ವಿಚಿತ್ರ ಕೋಳಿ ಮರಿ ಕುರಿತು ಚರ್ಚೆ ಮಾಡುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)