ಪ್ರಮುಖ ಸುದ್ದಿ

ಅಕ್ರಮ ಕಲ್ಲು ಗಣಿಗಾರಿಕೆಗೆ ಮಂಡ್ಯ ಖಡಕ್ ಡಿಸಿ ಮಂಜುಶ್ರೀ ಯಿಂದ ಬ್ರೇಕ್ : ಜಿಲ್ಲಾಧಿಕಾರಿಗಳ ಎತ್ತಂಗಡಿಗೆ ಮುಂದಾದ ರಾಜ್ಯ ಸರ್ಕಾರ?

ರಾಜ್ಯ(ಮಂಡ್ಯ)ಡಿ.24:- ಮಂಡ್ಯ ಜಿಲ್ಲೆಯ ಅಕ್ರಮ ಕಲ್ಲು ಗಣಿಗಾರಿಕೆಗೆ ಖಡಕ್  ಜಿಲ್ಲಾಧಿಕಾರಿ ಮಂಜುಶ್ರೀ ಯಿಂದ ಬ್ರೇಕ್  ಬೀಳುತ್ತಿರುವ ಹಿನ್ನಲೆಯಲ್ಲಿ  ಖಡಕ್ ಜಿಲ್ಲಾಧಿಕಾರಿಗಳ ಎತ್ತಂಗಡಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಂಡ್ಯ ಡಿ‌ಸಿ. ಎನ್.‌ಮಂಜುಶ್ರೀ ವರ್ಗಾವಣೆಗೆ ಸಿ.ಎಂ.‌ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಜಿಲ್ಲೆಯ ಪ್ರಭಾವಿ ಗಣಿ ಧಣಿಗಳ ಒತ್ತಡಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಣಿದಿದ್ದಾರಾಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. 7 ಕ್ಕೆ 7 ಕ್ಷೇತ್ರ ಗೆಲ್ಲಿಸಿಕೊಟ್ಟ ಮಂಡ್ಯ ಜನರಿಗಿಂತ ಸಿ.ಎಂ.ಗೆ  ಕಲ್ಲು ಧಣಿಗಳೇ ಹಿತವೇ ಮುಖ್ಯವಾಯ್ತ ಎಂಬ ಪ್ರಶ್ನೆಗಳೆದ್ದಿದ್ದು ಡಿ.ಸಿ. ವರ್ಗಾವಣೆಯ ಬಳಿಕ ಜಿಲ್ಲೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆಯ ಸದ್ದು ಮತ್ತೆ  ಕೇಳಿ ಬರಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ತಮ್ಮ ದಾರಿಗೆ ಬರದ ದಕ್ಷ ಅಧಿಕಾರಿಗಳನ್ನು ತಮ್ಮ ಪ್ರಭಾವದ ಮೂಲಕ ವರ್ಗಾವಣೆ ಮಾಡಿಸುವುದನ್ನು ಪ್ರಭಾವಿ ಗಣಿಧಣಿಗಳು ದಂಡವನ್ನಾಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: