ಮೈಸೂರು

ಅನಾಚಾರ ತಡೆಯಲು ಗಾಂಧೀಜಿಯವರ ಚಿಂತನೆಯ ಶಾಂತಿ ಅಗತ್ಯ : ಪ್ರೊ.ಕೆ.ಎಸ್.ರಂಗಪ್ಪ

ದೇಶದಲ್ಲಿ ನಡೆಯುತ್ತಿರುವ ಅನ್ಯಾಯ, ಅನಾಚಾರಗಳನ್ನು ತಡೆಗಟ್ಟಲು ಗಾಂಧಿಯವರ ಚಿಂತನೆಯ ಶಾಂತಿ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಮಾದರಿ ಸಬರಮತಿ ಆಶ್ರಮದ ಉದ್ಘಾಟನೆ ಮತ್ತು ಗಾಂಧಿ ಚಿಂತನೆಗಳ ಪುಸ್ತಕಗಳನ್ನು ಪ್ರೊ.ಕೆ.ಎಸ್.ರಂಗಪ್ಪ ಲೋಕಾರ್ಪಣೆಗೊಳಿಸಿದರು. ಬಳಿಕ  ಮಾತನಾಡಿದ ಅವರು ಗಾಂಧೀಜಿಯಂತಹ ಮಹಾತ್ಮರು ಹುಟ್ಟಿದ್ದೇ ನಮ್ಮ ಪುಣ್ಯ ಎಂದು ವಿವರಿಸಿದರು.

ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ,ಗಾಂಧೀ ಭವನ ಸಂಸ್ಥಾಪಕ ಅಧ್ಯಕ್ಷ ಡಾ.ಜಿ.ಮಾದೇಗೌಡ, ಶ್ರೀ ಕೃಷ್ಣಪ್ಪ ಸೇವಾಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಇಂದಿರಾ ಕೃಷ್ಣಪ್ಪ, ಮಹಾತ್ಮಗಾಂಧಿ ಮ್ಯೂಸಿಯಂ ನಿರ್ದೇಶಕ ಡಾ.ಎ.ಅಣ್ಣಾಮಲೈ, ಸಬರಮತಿ ಆಶ್ರಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ.ವೀರಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: