ಮೈಸೂರು

ನಾಳೆಯಿಂದ ಕಿನ್ನಾಳ ಚಿತ್ರಕಲಾ ಪ್ರದರ್ಶನ : ಪ್ರಾತ್ಯಕ್ಷಿಕೆ ದೃಶ್ಯ ಪ್ರಸ್ತುತಿ

ಮೈಸೂರು,ಡಿ.24 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರವಿವರ್ಮ ಚಿತ್ರಕಲಾ ಶಾಲೆಯಿಂದ ಕಿನ್ನಾಳ ಚಿತ್ರಕಲಾ ಪ್ರದರ್ಶನ, ಕಲಾಕೃತಿ ಪ್ರಾತ್ಯಕ್ಷಿಕೆ, ದೃಶ್ಯ ಪ್ರಸ್ತುತಿ ಹಾಗೂ ಚಲನಚಿತ್ರ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ‘ವಿಜ್ಯುವಲ್ ಎಸೆನ್ಸ್’ ಅನ್ನು ಡಿ.25ರ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.

ಹಿರಿಯ ಖ್ಯಾತ ಕಲಾವಿದ ಡಾ.ಲಕ್ಷ್ಮಣ್ ಪ್ರಸಾದ್ ಅವರು ಕಲಾಕೃತಿ ಪ್ರಾತ್ಯಕ್ಷಿಕೆ ಮತ್ತು ದೃಶ್ಯ ಪ್ರಸ್ತುತಿ ನೀಡಲಿದ್ದಾರೆ. ವಿದ್ಯಾರ್ಥಿ ಎಸ್. ಲಿಖಿತ್ ಕುಮಾರ್ ನಿರ್ದೇಶನದ ಚಿತ್ರ’ತ್ಯಾಗ’ದ ಟ್ರೇಲರ್ ಬಿಡುಗಡೆ. ಹಿರಿಯ ಕಲಾವಿದ ಎಂ.ಜಿ.ದೊಡ್ಡಮನಿ ಅವರಿಂದ ವಿಜ್ಯುವಲ್ ಎಸೆನ್ಸ್ ಉದ್ಘಾಟನೆ, ಚಿತ್ರಕಲಾ ಶಾಲೆಯ ಪ್ರಾಚಾರ್ಯರಾದ ಶಿವಕುಮಾರ ಕೆಸರಮಡು ಇರಲಿದ್ದಾರೆ.

ಡಿ.29ರವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವಿರಲಿದೆ ಎಂದು ಪ್ರಾಚಾರ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: