ಕರ್ನಾಟಕ

ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಹಾಸನ ಜಿಲ್ಲಾದ್ಯಂತ ಸಭೆ

ಹಾಸನ (ಡಿ.24): ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ಅಧಿಕೃತ ವಿಳಂಬ, ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ದ ನಾಗರೀಕರು ದೂರುಗಳನ್ನು ನೀಡುವ ಸಲುವಾಗಿ ಪೊಲೀಸ್ ಠಾಣೆ, ಭ್ರಷ್ಠಾಚಾರ ನಿಗ್ರಹ ದಳದವರು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11.30 ರಿಂದ 12.30 ಗಂಟೆಯವರೆಗೆ ಮತ್ತು ಮದ್ಯಾಹ್ನ 02.30 ಗಂಟೆಯಿಂದ ಸಂಜೆ 03.30 ಗಂಟೆಯವರೆಗೆ ಸಭೆಯನ್ನು ಹಮ್ಮಿಕೊಂಡಿದ್ದು.

ಜನವರಿ 5 ರಂದು ಅರಸೀಕೆರೆ ತಾಲ್ಲೂಕು ಪ್ರವಾಸಿ ಮಂದಿರದಲ್ಲಿ 11.30 ರಿಂದ 12.30 ರವರೆಗೆ ಮದ್ಯಾಹ್ನ 02.30 ರಿಂದ 03.30 ರವರೆಗೆ ಜೆ.ಸಿ.ಪುರ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ, ಜನವರಿ 8 ರಂದು ಹಾಸನ ತಾಲ್ಲೂಕು ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11.30 ರಿಂದ 12.30 ರವರೆಗೆ ಮದ್ಯಾಹ್ನ 02.30 ರಿಂದ 03.30 ರವರೆಗೆ ಸಾಲಗಾಮೆ ನಾಡ ಕಚೇರಿಯಲ್ಲಿ, ಜನವರಿ 10 ರಂದು 11.30 ರಿಂದ 12.30 ರವರೆಗೆ ಬೇಲೂರು ತಾಲ್ಲೂಕು ಪ್ರವಾಸಿ ಮಂದಿರ ಮದ್ಯಾಹ್ನ 02.30 ರಿಂದ 03.30 ರವರೆಗೆ ಹಗರೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ, ಜನವರಿ 11 ರಂದು ಚನ್ನರಾಯಪಟ್ಟಣ ತಾಲ್ಲೂಕು ಪ್ರವಾಸಿ ಮಂದಿರದಲ್ಲಿ 11.30 ರಿಂದ 12.30 ರವರೆಗೆ ಮದ್ಯಾಹ್ನ 02.30 ರಿಂದ 03.30 ರವರೆಗೆ ನುಗ್ಗೆಹಳ್ಳಿ ನಾಡ ಕಚೇರಿಯಲ್ಲಿ, ಜನವರಿ 16 ರಂದು ಆಲೂರು ತಾಲ್ಲೂಕು ಪ್ರವಾಸಿ ಮಂದಿರ 11.30 ರಿಂದ 12.30 ರವರೆಗೆ ಮದ್ಯಾಹ್ನ 02.30 ರಿಂದ 03.30 ರವರೆಗೆ ಮಗ್ಗೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ, ಜನವರಿ 19 ರಂದು ಹೊಳೆನರಸೀಪುರ ತಾಲ್ಲೂಕು ಪ್ರವಾಸಿ ಮಂದಿರದಲ್ಲಿ 11.30 ರಿಂದ 12.30 ರವರೆಗೆ 02.30 ರಿಂದ 03.30 ರವರೆಗೆ ಹಳ್ಳಿಮೈಸೂರು ನಾಡ ಕಚೇರಿಯಲ್ಲಿ, ಜನವರಿ 22 ರಂದು 11.30 ರಿಂದ 12.30 ರವರೆಗೆ ಅರಕಲಗೂಡು ತಾಲ್ಲೋಕ್ ಪ್ರವಾಸಿ ಮಂದಿರ. ಮದ್ಯಾಹ್ನ 02.30 ರಿಂದ 03.30 ರವರೆಗೆ ರಾಮನಾಥಪುರ ನಾಡ ಕಚೇರಿಯಲ್ಲಿ, ಜನವರಿ 23 ರಂದು ಬೆಳಿಗ್ಗೆ 11.30 ರಿಂದ 12.30 ರವರೆಗೆ ಸಕಲೇಶಪುರ ತಾಲ್ಲೂಕು ಪ್ರವಾಸಿ ಮಂದಿರ ಮದ್ಯಾಹ್ನ 02.30 ರಿಂದ 03.30 ರವರೆಗೆ ಯಸಳೂರು ನಾಡ ಕಚೇರಿಯಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಪೊಲೀಸ್ ಠಾಣೆ ಭ್ರಷ್ಟಾಚಾರ ನಿಗ್ರಹ ದಳ ಠಾಣಾಧಿಕಾರಿ ಹಾಗೂ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: