ಮೈಸೂರು

ನೆನೆಗುದಿಗೆ ಬಿದ್ದಿದ್ದ ಇರ್ವಿನ್ ರೋಡ್ ಅಗಲೀಕರಣಕ್ಕೆ ಸಚಿವ ಜಿ.ಟಿ.ದೇವೇಗೌಡ ಚಾಲನೆ

ಮೈಸೂರು,ಡಿ.25:-  ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಇರ್ವಿನ್ ರೋಡ್ ಗೆ ಇಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಗುದ್ದಲಿಪೂಜೆ ನೆರವೇರಿಸುವ ಮೂಲಕ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. 63 ಕೋಟಿ ವೆಚ್ಚದಲ್ಲಿ ಈ ಕೆಲಸ ನಡೆಯುತ್ತಿದ್ದು, ರಸ್ತೆ ಅಗಲೀಕರಣಕ್ಕೆ82  ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಈಗಾಗಲೇ  3 ಕಟ್ಟಡಗಳು ರಿಜಿಸ್ಟ್ರೇಷನ್ ಆಗಿದೆ. ನಾಳೆ 7 ಕಟ್ಟಡಗಳು ರಿಜಿಸ್ಟ್ರೇಷನ್ ಅಗುತ್ತೆ ಎಂದು ಮಾಹಿತಿ ನೀಡಿದರು.ಸೂಕ್ತ ಪರಿಹಾರ ನೀಡುವ ಪ್ರಕ್ರಿಯೆ ಶುರುವಾಗಿದೆ. ಇನ್ನೂ ಎರಡು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ ಎಂದರು.

ಇರ್ವಿನ್ ರಸ್ತೆ ಇತಿಹಾಸವನ್ನು ನೆನಪಿಸಿಕೊಂಡ ಸಚಿವರು, ಆ ಕಾಲದಲ್ಲೇ ಈ ರಸ್ತೆಯಲ್ಲಿ ಎಸ್ ಬಿಐ ಬ್ಯಾಂಕ್,  ಮಹಿಳಾ ಬ್ಯಾಂಕು, ಪೋಸ್ಟ್ ಆಫೀಸ್,  ಪೊಲೀಸ್ ಸ್ಟೇಷನ್ ಇತ್ತು. ನಾನು ಸಹ ಈ ರಸ್ತೆಯಲ್ಲೇ ಟೀ ಕುಡಿಯುತ್ತಿದ್ದೆ ಎಂದು ಹೇಳಿದರು.

ಈ ವೇಳೆ ಶಾಸಕ ಎಲ್ ನಾಗೇಂದ್ರ. ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್. ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತಿತರರು ಹಾಜರಿದ್ದರು.

ಇದೇ ವೇಳೆ ಚಾಮುಂಡಿ ಬೆಟ್ಟದ ಅರ್ಚಕರ ವೇತನ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಈಗಾಗಲೇ ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಲಾಗಿದೆ. ನಿನ್ನೆ ಸಭೆಯನ್ನು ಕಾರಣಾಂತರಗಳಿಂದ ಮೂಂದೂಡಲಾಗಿದೆ. ದೇವಿಯ ಪೂಜೆ ಮಾಡುವ ಅರ್ಚಕರು ಪ್ರತಿಭಟನೆ ಮಾಡಬಾರದು. ಆರನೇ ವೇತನ ಪರಿಷ್ಕರಣೆ ಚಾಮುಂಡಿ ಬೆಟ್ಟದ ಅರ್ಚಕರ ಸಮಸ್ಯೆ ಅಲ್ಲ. ಮುಜರಾಯಿ ದೇವಾಲಯದ ಅರ್ಚಕರ ಸಮಸ್ಯೆ. ಶೀಘ್ರವೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಯಾವುದೇ ಕಾರಣಕ್ಕೂ ಅರ್ಚಕರು ಪ್ರತಿಭಟನೆ ಮಾಡಬಾರದು ಎಂದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: