ಮನರಂಜನೆ

ಅಗ್ನಿಸಾಕ್ಷಿ ಧಾರವಾಹಿಯ ಮಾಯಾ ಹೊಸ್ ಲುಕ್‍ಗೆ ಪ್ರೇಕ್ಷಕ ಫಿದಾ!

ಬೆಂಗಳೂರು (ಡಿ.25): ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಮಾಯ ಅಲಿಯಾಸ್ ಇಶಿತಾ ವರ್ಷಾ ಹೊಸ ಲುಕ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಇದೇ ಮೊದಲ ಬಾರಿಗೆ ‘ಸ್ವಾರ್ಥ ರತ್ನ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಸಿನಿಮಾದ ಹಾಡೊಂದು ಇದೀಗ ವೈರಲ್ ಆಗಿದೆ. ಅದರಲ್ಲಿ ರೆಟ್ರೋ ಲುಕ್ ನಲ್ಲಿರುವ ಈ ಹಾಡು ಯೂ ಟ್ಯೂಬ್ ನಲ್ಲಿ ಹಿಟ್ ಆಗಿದ್ದು, ಸಾಕಷ್ಟು ಲೈಕ್ಸ್ ಪಡೆದಿವೆ.

“ನಿನ್ನ ನಯನ..” ಎಂದು ಶುರುವಾಗುವ ಹಾಡಿನಲ್ಲಿ ಇಶಿತಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹಳೇ ಸಿನಿಮಾಗಳಲ್ಲಿ ನಾಯಕ-ನಾಯಕಿ ಮರ ಸುತ್ತುವ ಲವ್ ಸಾಂಗ್ ನಂತೇ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಹೊಸಬರ ತಂಡ ಮಾಡಿದ ಈ ಸಿನಿಮಾದಲ್ಲಿ ಇಶಿತಾಗೆ ಆದರ್ಶ್ ನಾಯಕರಾಗಿದ್ದಾರೆ. (ಎನ್.ಬಿ)

Leave a Reply

comments

Related Articles

error: