ಮೈಸೂರು

ಎಪಿಎಂಸಿ ಚುನಾವಣೆ : ಪ್ರಕಾಶ್ ಅವರಿಗೆ ಮತ ನೀಡಲು ನಿರ್ಧಾರ

ಮೈಸೂರಿನ ಎ.ಪಿ.ಎಂ.ಸಿ  ಚುನಾವಣೆಯಲ್ಲಿ  ವರ್ತಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್. ಪ್ರಕಾಶ್ ಅವರಿಗೆ ಮತ ನೀಡಲು ತೀರ್ಮಾನಿಸಲಾಗಿದೆ ಎಂದು ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯ ಸಗಟು ಹಣ್ಣುಗಳ ಮಾರುಕಟ್ಟೆಯ ಸಗಟು ಹಣ್ಣು ವರ್ತಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಮೈಸೂರಿನ ನ್ಯೂ ಸಯಾಜಿರಾವ್ ರಸ್ತೆಯ ಸಗಟು ಹಣ್ಣುಗಳ ಮಾರುಕಟ್ಟೆಯಲ್ಲಿ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಹೂವಿನ ಸಂಘದ ಪದಾಧಿಕಾರಿ ಎಸ್.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಹುಮಾಯುನ್ ಫರ್ ಪದ್ಥರ್ ಬಾಬು, ಅಲೀಂ ಷರೀಫ್ ಅಫಜಲ್ ಅನ್ಸಾರಿ ಸಿಕಂದರ್ ಹಾಗೂ ಬಾಳೆಕಾಯಿ ಮತ್ತು ಬಾಳೆಹಣ್ಣು ವರ್ತಕರ ಸಂಘದ ಪದಾಧಿಕಾರಿಗಳಾದ ರಂಗಸ್ವಾಮಿ,  ಮಹಾದೇವ. ನಿಂಬೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಚಿಕ್ಕಣ್ಣ, ಮಾವಿನ ಹಣ್ಣಿನ ವರ್ತಕರ ಸಂಘದ ಅಧ್ಯಕ್ಷ ಫಾರೋಕ್ ಪಾಶಾ ಮತ್ತು ಸಂಘದ ವರ್ತಕರು ಉಪಸ್ಥಿತರಿದ್ದರು.

Leave a Reply

comments

Related Articles

error: