ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಕಾರ್ಯಾಗಾರ

ಮೈಸೂರು ವಿಶ್ವವಿದ್ಯಾನಿಲಯ ಸ್ಪರ್ಧಾ ಕೇಂದ್ರ ಹಾಗೂ ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರದ ಆಶ್ರಯದಲ್ಲಿ ಹಳ್ಳಿಗೊಬ್ಬ, ಕಾಲೇಜಿಗೊಬ್ಬ ಐಎಎಸ್, ಕೆಎಎಸ್ ಯೋಜನೆ ಮತ್ತು ಐಎಎಸ್, ಕೆಎಎಸ್ ಪರೀಕ್ಷೆಯ ಕುರಿತು ಒಂದು ದಿನದ ಉಚಿತ ಕಾರ್ಯಾಗಾರವನ್ನು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕಾರ್ಯಾಗಾರವನ್ನು ನಡೆಸುವ ಉದ್ದೇಶ ಮತ್ತು ಅದರ ಮಹತ್ವ, ವಿದ್ಯಾರ್ಥಿಗಳು ಅದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎನ್ನುವುದರ ಕುರಿತು ವಿವರಿಸಿದರು.

ಆರು ಮಂದಿ ಐಪಿಎಸ್ ಪ್ರೊಬೆಷನರಿ ಹುದ್ದೆಯವರು ಕಾರ್ಯಾಗಾರದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ  ಡಾ. ಚಂದ್ರಶೇಖರ  ಕೆ.ಎನ್, ಡಿ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: