ಮೈಸೂರು

ಡಿ.27 ರಿಂದ ರಸಾಯನಿಕ ಜೀವಶಾಸ್ತ್ರದ ವಿಸ್ತರಣಾ ಉಪನ್ಯಾಸ

ಮೈಸೂರು,ಡಿ.25 : ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ರಸಾಯನಶಾಸ್ತ್ರ ವಿಭಾಗದ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಯೋಗದಲ್ಲಿ ‘ರಸಾಯನಿಕ ಜೀವಶಾಸ್ತ್ರ’ ವಿಷಯವಾಗಿ ಡಿ.27,28ರಂದು ವಿಸ್ತರಣಾ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಡಿ.27ರ ಬೆಳಗ್ಗೆ 10 ಗಂಟೆಗೆ ಹಿರಿಯ ವಿಜ್ಞಾನಿ ಡಾ.ಎಂ.ನೇತಾಜಿ ಸಮಾರಂಭವನ್ನು ಉದ್ಘಾಟಿಸುವರು. ಕುಲಪತಿ ಡಾ.ಬಿ.ಜಿ.ಸಂಗಮೇಶ್ ಅಧ್ಯಕ್ಷತೆ ವಹಿಸುವರು.

ಡಿ.28ರ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಬೆಂಗಳೂರಿನ ಐಐಎಸ್ ಸಿ ಹಿರಿಯ ವಿಜ್ಞಾನಿ ಡಾ.ದೀಪಕ್, ಜೆಎಸ್ಎಸ್ ಕುಲಸಚಿವ ಡಾ.ಕೆ.ಎಸ್.ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ರಸಾಯನಶಾಸ್ತ್ರ ವಿಭಾಗದ ಡಾ.ಪಿ.ಮಲ್ಲು ಕಾರ್ಯಾಗಾರದ ಸಂಯೋಜಕರಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: