ಮೈಸೂರು

ಜೀವ ಜಲ ಉಳಿಸಿ ಜಾಥಾ

ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ವತಿಯಿಂದ ಮಹಾರಾಣಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಬಿ.ಎನ್.ಐ ಸಂಸ್ಥೆ, ಜೀನಿಯಸ್ ಕಾಲೇಜು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೈಸೂರಿನ ಜೆನರಲ್ ಕಾರ್ಯಪ್ಪ ಸರ್ಕಲ್ (ಮೆಟ್ರೊಪೋಲ್ ಸರ್ಕಲ್) ಬಳಿಯಿಂದ ಸೋಮವಾರ ‘ಜೀವ ಜಲ ಉಳಿಸಿ’ ಎಂಬ ಘೋಷವಾಕ್ಯದೊಡನೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಸಮಾಜಮುಖಿ ಜಲಜಾಗೃತಿ ಜಾಥಾವು ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ಜೆನರಲ್ ಕಾರ್ಯಪ್ಪ ಸರ್ಕಲ್ (ಮೆಟ್ರೊಪೋಲ್ ಸರ್ಕಲ್) ನಿಂದ ಹೊರಟು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಾಥಾದಲ್ಲಿ ಶಾಸಕ ವಾಸು, ಮೈಸೂರು ಮಹಾನಗರಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಮ.ನ. ಲತಾಮೋಹನ್, ಡಾ. ವಿಜಯ, ಮೋಹನ್ ಗೌಡ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

comments

Related Articles

error: