ಕರ್ನಾಟಕಪ್ರಮುಖ ಸುದ್ದಿ

ಮದ್ದೂರಲ್ಲಿ ಕೊಲೆಗೀಡಾದ ಪ್ರಕಾಶ್ ಕುಟುಂಬಸ್ಥರಿಗೆ ಸಿಎಂ ಎಚ್ಡಿಕೆ ಸಾಂತ್ವನ

ಮಂಡ್ಯ (ಡಿ.25): ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಟಿ.ಬಿ.ವೃತ್ತದ ಬಳಿ ಸೋಮವಾರ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಜನತಾ ದಳ (ಜಾತ್ಯತೀತ) ಪಕ್ಷದ ಮುಖಂಡರಾದ ಪ್ರಕಾಶ್ ಅವರ ಪ್ರಾರ್ಥಿವ ಶರೀರದ ದರ್ಶನವನ್ನು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೃತರ ಸ್ವಗ್ರಾಮ ಮದ್ದೂರು ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜನಪರ ಕಾಳಜಿವುಳ್ಳ ವ್ಯಕ್ತಿಯಾಗಿದ್ದ ಪ್ರಕಾಶ್ ಅವರನ್ನು ಕಳೆದುಕೊಂಡು ನನಗೆ ತುಂಬಾ ನೋವಾಗಿದೆ. ಪ್ರಕಾಶ್ ಕುಟುಂಬಸ್ಥರಿಗೆ ನೋವಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಈ ಸಂದರ್ಭದಲ್ಲಿ ಭಗವಂತನಲ್ಲಿ ಪಾರ್ಥಿಸುತ್ತೇನೆ ಎಂದರು.

ನನ್ನ ಆಡಳಿತ ಅವಧಿಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು. ಪ್ರಕಾಶ್ ಅವರ ಹತ್ಯೆಯ ಸೂಚನೆಯನ್ನು ಗಾಮಸ್ಥರು ಅಧಿಕಾರಿಗಳಿಗೆ ನೀಡಿದ್ದರೂ ಸಹ ಈ ಬಗ್ಗೆ ಕ್ರಮ ವಹಿಸದಿರುವ ಮಾಹಿತಿ ಲಭ್ಯವಾಗಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮವಹಿಸಲು ಆದೇಶಿಸಿದ್ದೇನೆ ಎಂದ ಮುಖ್ಯಮಂತ್ರಿಯವರು ಈ ಪ್ರಕರಣಕ್ಕೆ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಎರಡು ವರ್ಷಗಳ ಹಿಂದೆ ತೊಪ್ಪನಹಳ್ಳಿಯಲ್ಲಿ ಜೋಡಿ ಹತ್ಯೆಯಾದಾಗ ನಾನು ಈ ಗ್ರಾಮಕ್ಕೆ ಬಂದಿದೆ. ಆಗ ಪ್ರಕಾಶ್ ಕೊಲೆಯಾದ ವ್ಯಕ್ತಿಗಳ ಕುಡುಂಬದ ಪರ ನಿಂತಿದ್ದರು. ಅದೇ ಕಾರಣ ಇವತ್ತು ಪ್ರಕಾಶ್ ಕೊಲೆಯಾಗಲು ಕಾರಣ ಅನಿಸುತ್ತಿದೆ. ಅವತ್ತು ಕೊಲೆ ಮಾಡಿದವರು ಇಂದು ಪ್ರಕಾಶ್ ಹತ್ಯೆ ಮಾಡಿದ್ದಾರೆ ಎಂದು ಮಾಹಿತಿ ಇದೆ. ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ತೊಡಕಿದೆ ಎಂದು ಪ್ರಜೆಯಾಗಿ ಬಹಳ ನೋವಿನಿಂದ ಈ ಮಾತನ್ನು ಹೇಳುತ್ತಿದ್ದೇನೆ. ಕೊಲೆ ಮಾಡುವ ಹಂತಕರು ಜಾಮೀನಿನ ಮೇಲೆ ಬಿಡುಗಡೆ ಹೊಂದುವ ವ್ಯವಸ್ಥೆ ನಮ್ಮ ಕಾನೂನಿನಲ್ಲಿದೆ ಎಂದು ಬೆಸರ ವ್ಯಕ್ತ ಪಡಿಸಿದರು.

ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ, ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್, ಸಂಸದರಾದ ಎಲ್.ಆರ್. ಶಿವರಾಮೇಗೌಡ, ಶಾಸಕರುಗಳಾದ ಸುರೇಶ್‍ಗೌಡ, ಅನ್ನದಾನಿ, ಶ್ರೀನಿವಾಸ್, ನಾರಾಯಣಗೌಡ, ರವಿಂದ್ರ ಶ್ರೀಕಂಠಯ್ಯ, ಅಪ್ಪಾಜಿ ಗೌಡ, ಅಧಿಕಾರಿಗಳು ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: