ಮೈಸೂರು

ಐಟಿಐ ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಗೆ ಉ‍ದ್ಯೋಗಾವಕಾಶ

ಮೈಸೂರು ಕೇಂದ್ರ ಅಕಾಡೆಮಿಯು ಐಟಿಐ ವಿಭಾಗದಲ್ಲಿ ಎಲೆಕ್ಟ್ರಿಕಲ್, ಫಿಟ್ಟರ್ ಮತ್ತು ಮೆಕಾನಿಕಲ್ ಅಭ್ಯರ್ಥಿಗಳಿಗೆ ಹಾಗೂ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ವಿಭಾಗದವರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಈ ಸದಾವಕಾಶ ನೀಡಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಈ ಉದ್ಯೋಗ ಮೇಳವನ್ನು ಸೆ.20ರ ಬೆ.9 ಗಂಟೆಗೆ ಸರಸ್ವತಿಪುರಂನ ಮೈಸೂರು ಕೇಂದ್ರ ಅಕಾಡೆಮಿಯಲ್ಲಿ ಏರ್ಪಡಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 0821-2526999, 9591266006 ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: