ಮೈಸೂರು

ಪೊಲೀಸರಲ್ಲಿಯೂ ಮಾನವೀಯತೆ ಇದೆ : ಶಾಸಕ ವಾಸು

28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಪ್ರಯುಕ್ತ ಮೈಸೂರಿನ ವಿನೋಬ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಮಂಗಳವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ರಕ್ತದಾನ ಶಿಬಿರವನ್ನು ಶಾಸಕ ಪಿ.ವಾಸು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಕ್ತ ಇನ್ನೊಬ್ಬರ ಜೀವವನ್ನು ಉಳಿಸಲಿದೆ. ಪೊಲೀಸರಿಗೂ ಮಾನವೀಯತೆ ಇದೆ ಎನ್ನುವುದನ್ನು ರಕ್ತದಾನ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಮಾತನಾಡಿ, ಸಪ್ತಾಹದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದಾರೆ. ಪೊಲೀಸರು ಎಂದರೆ ಸಾರ್ವಜನಿಕರು ಭಯ ಬೀಳುವ ಅಗತ್ಯವಿಲ್ಲ. ಅವರೂ ಎಲ್ಲರಂತೆ ಮನುಷ್ಯರು. ಅವರಲ್ಲಿಯೂ ಕರುಣೆ, ಅನುಕಂಪಗಳಿವೆ ಎಂದು ತಿಳಿಸಿದರಲ್ಲದೇ ಸ್ವತಃ ತಾವೇ ರಕ್ತದಾನದಲ್ಲಿ ಪಾಲ್ಗೊಂಡರು.

ಈ ಸಂದರ್ಭ ಉಪ ಪೊಲೀಸ್ ಆಯುಕ್ತ ಎನ್.ರುದ್ರಮುನಿ ಸೇರಿದಂತೆ, ಡಿಸಿಪಿ ಮತ್ತು ಎಸಿಪಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: