ಲೈಫ್ & ಸ್ಟೈಲ್

ಚಳಿಗಾಲದ ಐದು ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಲು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಲು ನಾವು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಧೂಳು ಹೋಗದಂತೆ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಮತ್ತು ದ್ರವ ಪದಾರ್ಥವನ್ನು ಹೆಚ್ಚಾಗಿ ಸೇವಿಸುವುದು, ಜೊತೆಗೆ ಆರೋಗ್ಯಕರ ಪಥ್ಯವನ್ನು ಅನುಸರಿಸುವುದು ಮುಖ್ಯ ಎನ್ನುತ್ತಾರೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸಲಹಾ ಆಂತರಿಕ ಔಷಧ ವಿಭಾಗದ ಡಾ. ಸತೀಶ್ ಕುಮಾರ್

“ಡಿಸೆಂಬರ್ ತಿಂಗಳಿನೊಂದಿಗೆ ಚಳಿಗಾಲವೂ ಬಂದಿದೆ, ಜೊತೆಗೆ ಋತುಮಾನದ ಜ್ವರ, ಶೀತ ಮತ್ತು ಇತರೆ ಅಸ್ವಸ್ಥತೆಗಳನ್ನು ತಂದಿದೆ. ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗೆ ಇಟ್ಟುಕೊಳ್ಳದೇ ಇರುವುದರಿಂದ ಅಥವಾ ತಣ್ಣಗಿನ ಹವೆಗೆ ತೆರೆದುಕೊಳ್ಳುವುದರಿಂದ ಶೀತ ಕಾಡುತ್ತದೆ ಎಂಬುದು ಹಲವರ ನಂಬಿಕೆ. ಶೀತ, ವೈರಸ್ನ ಕಣಗಳು ಉಸಿರಿನೊಂದಿಗೆ ಸೇರಿಕೊಂಡಾಗ ಉಂಟಾಗುವ ಒಂದು ಮೇಲ್ಭಾಗ ಶ್ವಾಸೇಂದ್ರಿಯ ಪ್ರದೇಶದ ಸೋಂಕು. ಸಾಮಾನ್ಯ ಶೀತ ಬಾಧಿತ ವ್ಯಕ್ತಿಯ ಸೀನು, ಮಾತು ಮತ್ತು ಮೂಗಿನಿಂದ ಬರುವ ಸಡಿಲ ಕಣಗಳನ್ನು ಒರೆಸಿಕೊಳ್ಳುವುದರ ಮೂಲಕ ಹರಡುತ್ತದೆ. ವೈರಸ್, ನೆಗಡಿಯಿಂದ ಕಲುಷಿತವಾದ ಪ್ರದೇಶಗಳನ್ನು ಮಟ್ಟುವುದರಿಂದಲೂ ಹರಡಬಹುದು,” ಎನ್ನುವುದು ಸತೀಶ್ ಕುಮಾರ್ ಅಭಿಪ್ರಾಯ. ಹಾಗಾದರೆ ಚಳಿಗಾಲದ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದು ಹೇಗೆ ಇಲ್ಲಿದೆ ಅದಕ್ಕೆ ಉತ್ತರ

ಚಳಿಗಾಲದ ಐದು ಸಾಮಾನ್ಯ ಆರೋಗ್ಯ ಸಮಸ್ಯೆಗಳು, ತಡೆಗಟ್ಟುವಿಕೆ ಮತ್ತು ಆರೈಕೆ

ಗಂಟಲುಬೇನೆ

ನೋವು ಭರಿತ ತುರಿಕೆಯುಳ್ಳ ಅಥವಾ ಗಂಟಲಿನಲ್ಲಿ ಒಣಗಿದ ಅನುಭವವಾಗಿ, ನಂತರ ನೋವು ಕಾಡಲು ಆರಂಭಿಸುವುದು ಗಂಟಲು ಬೇನೆಯ ಸಾಮಾನ್ಯ ಲಕ್ಷಣಗಳು. ಹೆಚ್ಚಾಗಿ ಇದು ಸೋಂಕಿನಿಂದಾಗಿ ಮತ್ತು ವಾತಾವರಣದ ಬದಲಾವಣೆಯಿಂದಾಗಿ ಉಂಟಾಗುತ್ತದೆ.

ಅಸ್ತಮಾ

ಇದೊಂದು ಶ್ವಾಸಕೋಶದ ಕಾಯಿಲೆ, ಇದರಲ್ಲಿ ಉರಿಯೂತ ಮತ್ತು ಉಸಿರನಾಳದ ಕಿರಿದಾಗುವಿಕೆ ಉಂಟಾಗುತ್ತದೆ. ಸೀನು, ಕೆಮ್ಮು, ಎದೆ ಬಿಗಿಹಿಡಿದ ಅನುಭವಗಳು ಕೆಲವು ಸಾಮಾನ್ಯ ಗುಣಲಕ್ಷಣಗಳು. ಅಸ್ತಮಾದಲ್ಲಿ ಎರಡು ರೀತಿಯವುಗಳು. ಅಲರ್ಜಿಯಿಂದಾಗುವ ಅಸ್ತಮಾ- ಇದು ಅಲರ್ಜಿಗೆ ತೆರೆದುಕೊಳ್ಳುವುದರಿಂದ ಆಗುತ್ತದೆ. ದೂಳು, ಪರಾಗ, ಪೈಂಟ್ನ ಧೂಳು ಮತ್ತು ಹೊಗೆ. ಅಲರ್ಜಿಯಿಂದ ಹೊರತಾದದ್ದು- ಇದು ಶೀತದಿಂದ ಆಗುತ್ತದೆ, ಜ್ವರ, ಸುಸ್ತು ಅಥವಾ ವಿಪರೀತ ಹವೆಗೆ ತೆರೆದುಕೊಳ್ಳುವುದರಿಂದ ಬರುತ್ತದೆ.

ಕೀಲು ನೋವು

ಮೂಳೆತಜ್ಞರು ಹೇಳುವಂತೆ ಶೀತ ಹವಾಗುಣದಲ್ಲಿ ಮನುಷ್ಯನ ದೇಹ ಹೆಚ್ಚಿನ ಉಷ್ಣಾಂಷವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಹೆಚ್ಚಿನ ರಕ್ತ ಹೃದಯಕ್ಕೆ ಮತ್ತು ಶ್ವಾಸಕೋಶಕ್ಕೆ ಹರಿಯುತ್ತದೆ. ಆದುದರಿಂದ, ಹೀಗಾಗುವುದರಿಂದ ಕೈಗಳು, ಭುಜಗಳು, ಮೊಣಕಾಲಿನ ಕೀಲುಗಳ ರಕ್ತನಾಳಗಳು ಎಳೆದು ಹಿಡಿದಂತಾಗಿ ನೋವು ಬಾಧಿಸುತ್ತದೆ.

ಜ್ವರ

ಫ್ಲೂವನ್ನು ಶೀತಜ್ವರ ಎಂದೂ ಕರೆಯುತ್ತಾರೆ, ಇದು ವೈರಸ್ನಿಂದ ಸಾಂಕ್ರಾಮಿತವಾದ ಉಸಿರಾಟದ ಗಂಭೀರ ಆರೋಗ್ಯ ಸಮಸ್ಯೆ. ಲಕ್ಷಣಗಳು ಸಾಮಾನ್ಯದಿಂದ ಹಿಡಿದು ಗಂಭೀರವಾಗಿರುತ್ತವೆ, ಕೆಲವೊಮ್ಮೆ ಆಸ್ಪತ್ರೆಗೆ ಸೇರಬೇಕಾಗಬಹುದು ಮತ್ತು ಅಪರೂಪಕ್ಕೆ ಸಾವೂ ಸಂಭವಿಸಬಹುದು. ಸಾಮಾನ್ಯವಾಗಿ ಎಳೆಯ ಮಕ್ಕಳು ಅಥವಾ ವಯಸ್ಸಾದವರಲ್ಲಿ ರೋಗನಿರೋಧಕ ವ್ಯವಸ್ಥೆ ಕಡಿಮೆಯಿರುವುದರಿಂದ ಅವರೇ ಹೆಚ್ಚಾಗಿ ಜ್ವರಕ್ಕೆ ಗುರಿಯಾಗುತ್ತಾರೆ.

ಹೃದಯಾಘಾತ

ದೇಹದ ಉಷ್ಣಾಂಶ (ಹೈಪೋಥರ್ಮಿಯಾ) ಚಳಿಗಾಲದಲ್ಲಿ ಕಡಿಮೆಯಾಗುವುದರಿಂದ ಹಿರಿಯರು ಹೆಚ್ಚು ಇದರ ಅಪಾಯಕ್ಕೊಳಗಾಗುತ್ತಾರೆ. ಹೆಚ್ಚುವ ಹೃದಯ ಬಡಿತ ಮತ್ತು ರಕ್ತದೊತ್ತಡ, ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಆಗ ದೇಹವನ್ನು ಬೆಚ್ಚಗಿರಿಸಲು ಹೃದಯ ಮಾಡಬೇಕಾದ ಕೆಲಸ ಹೆಚ್ಚುತ್ತದೆ. ಈ ಬದಲಾವಣೆಗಳು ರಕ್ತದ ಹೆಪ್ಪುಗಟ್ಟುವಿಕೆ ಅಥವಾ ರಕ್ತನಾಳಗಳು ಊದಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತವೆ. ಇದರಿಂದ ಹೃದಯಾಘಾತ ಮತ್ತು ಸ್ಟ್ರೋಕ್ ಉಂಟಾಗುವ ಸಾಧ್ಯತೆ ಹೆಚ್ಚು.

ತಡೆಗಟ್ಟುವಿಕೆ ಮತ್ತು ಆರೈಕೆ

ನಿರಂತರ ವ್ಯಾಯಾಮ

ವಿಶೇಷವಾಗಿ ಯೋಗ ಮತ್ತು ಈಜು ದೀರ್ಘಕಾಲಾವಧಿಯಲ್ಲಿ ಅನುಕೂಲಕರವೆನಿಸಬಹುದು. ಆ್ಯಂಟಿಬಯೋಟಿಕ್ ಗಳ ಬಳಕೆ ಮತ್ತು ಸ್ವಯಂ-ಚಿಕಿತ್ಸೆಯನ್ನು ದೂರಮಾಡಲೇಬೇಕು. ಅಸ್ತಮಾ ಮತ್ತು ಮಧುಮೇಹದಂತಹ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರಿಗೆ, ಹಿರಿಯರಿಗೆ ಮತ್ತು ಮಕ್ಕಳಿಗೆ ಚುಚ್ಚುಮದ್ದನ್ನು ಸೂಚಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಮೈಸೂರು ,ಫರಾಝ್ ಮೊಹಮ್ಮದ್ ಇಸ್ಮಾಯಿಲ್  +91 8884655366, ಕೆ2 ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಉದಯ್ ಕುಮಾರ್ /ಲಾವಣ್ಯ ವೆಂಕಟೇಶ್ ಅವರನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: