ಪ್ರಮುಖ ಸುದ್ದಿ

ಬಾರ್ ಹಿಂಬಾಗಿಲಿನ ಬೀಗ ಮುರಿದು ಕಳ್ಳತನ

ರಾಜ್ಯ(ಮಂಡ್ಯ)ಡಿ.26:- ಬಾರ್  ಒಂದರ ಹಿಂಬಾಗಿಲಿನ ಬೀಗ ಮುರಿದು ಕಳ್ಳರು ತಮ್ಮ ಕೈಚಳಕ ತೋರಿದ ಘಟನೆ ಮಳವಳ್ಳಿ ತಾಲೂಕಿನ ಹುಸ್ಕೂರು  ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಯೋಗಾನಂದ ಬಾರ್ ಗೆ ಕಳೆದ  ಎರಡು ದಿನಗಳ ಹಿಂದೆ  70 ಕೇಸು  ಸುಮಾರು ಎರಡೂವರೆ ಲಕ್ಷ ಮೌಲ್ಯದ  ಮದ್ಯ ಬಂದಿತ್ತು ಎನ್ನಲಾಗಿದೆ.   ಡಿ. 11 ರಂದು  ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ಹಿಟ್ಟನಹಳ್ಳಿಕೊಪ್ಪಲು  ಬಾರ್ ನಲ್ಲಿ   ಕಳ್ಳತನದ ಬೆನ್ನಲ್ಲೇ  ಮತ್ತೊಂದು ಕಳ್ಳತನ ಪ್ರಕರಣ ನಡದಿದ್ದು,  ಸ್ಥಳಕ್ಕೆ ಹಲಗೂರು ಪೊಲೀಸರು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಕೂಡ ಭೇಟಿ ನೀಡಿ ಪರಿಶೀಲನೆ  ನಡೆಸಿದೆ.  ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: