ಮೈಸೂರು

ಸಿ ಎಫ್ ಟಿ ಆರ್ ಐ ಸಭಾಂಗಣದಲ್ಲಿ ಕೊಬ್ಬರಿ ಎಣ್ಣೆ ತಯಾರಕರ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಮೈಸೂರು,ಡಿ.26:- ಮೈಸೂರಿನ ಸಿ ಎಫ್ ಟಿ ಆರ್ ಐ ನ ಸಭಾಂಗಣದಲ್ಲಿ ಕೊಬ್ಬರಿ ಎಣ್ಣೆ ತಯಾರಕರ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಸಿಎಫ್ ಟಿಆರ್ ಐನ  ಸಭಾಂಗಣದಲ್ಲಿ ನಡೆಯುತ್ತಿರುವ ತೆಂಗು ಅಭಿವೃದ್ಧಿ ಮಂಡಳಿಯ ವರ್ಜಿನ್ ಕೊಬ್ಬರಿ  ಎಣ್ಣೆ ತಯಾರಕರ ಸಮ್ಮೇಳನವನ್ನಿಂದು ತೆಂಗು ಅಭಿವೃದ್ಧಿ ಮಂಡಳಿಯ ಛೇರ್ಮನ್ ಡಾ.ರಾಜು  ನಾರಾಯಣಸ್ವಾಮಿ ಉದ್ಘಾಟಿಸಿದರು.

ಸಮ್ಮೇಳನದಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ರಾಜು ನಾರಾಯಣಸ್ವಾಮಿ ಹಾಗೂ ವಿಜ್ಞಾನಿಗಳು , ಕೈಗಾರಿಕೋದ್ಯಮಿಗಳು  ಕೊಬ್ಬರಿ ಎಣ್ಣೆಯ  ಸುರಕ್ಷತೆ, ಕಾನೂನು ನಿಯಮಗಳು, ನಿರ್ವಹಣೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ವರ್ಜಿನ್ ಕೊಬ್ಬರಿ ಎಣ್ಣೆ ತಯಾರಿಸಿದ ನಂತರ ಉಳಿಯುವ  ತ್ಯಾಜ್ಯ ಹಾಗೂ ಪೌಷ್ಠಿಕ ಪ್ರೊಟೀನ್  ಹೊರತೆಗೆಯುವ  ತಂತ್ರಜ್ಞಾನವನ್ನು  ಸಿಎಫ್ ಟಿಆರ್ ಐ ಅಭಿವೃದ್ಧಿ ಪಡಿಸಿದ್ದು ತೆಂಗು ಎಣ್ಣೆಯ ವಿವಿಧ ರೀತಿಯ ಬಳಕೆಯ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ  ನಡೆಸಲಾಗುತ್ತಿದೆ.

ಸಮ್ಮೇಳನದಲ್ಲಿ ಸಿಎಫ್ ಟಿ ಆರ್ ಐ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದ ಬಗ್ಗೆ ಹಿಮ್ಮಾಹಿತಿ  ಪಡೆಯುವ ಉದ್ದೇಶದಿಂದ ಹಾಗೂ ಕೈಗಾರಿಕೆಗಳಿಗೆ ಎದುರಾಗುವ ಸಮಸ್ಯೆಗಳನ್ನು ತಿಳಿಯಲು  ಹಾಗೂ ತಂತ್ರಜ್ಞಾನವನ್ನು ಬಲಪಡಿಸುವ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.

ಈ ಸಂದರ್ಭ ಸಿಎಫ್ ಟಿಆರ್ ಐ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್.ರಾಘವರಾವ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: