ಮನರಂಜನೆ

ಮಾರುವೇಷದಲ್ಲಿ `ಕೆಜಿಎಫ್’ ನೋಡಿದ ನಟ ಜಗ್ಗೇಶ್

ಬೆಂಗಳೂರು,ಡಿ.26-ನವರಸ ನಾಯಕ ಜಗ್ಗೇಶ್ ಮಾರು ವೇಷದಲ್ಲಿ ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರವನ್ನು ನೋಡಿದ್ದಾರೆ.

ಚಿತ್ರ ನೋಡಿ ಟ್ವಿಟ್ ಮಾಡಿರುವ ಜಗ್ಗೇಶ್, ಈ ಸಿನಿಮಾವನ್ನು ಗಾಂಧಿ ಕ್ಲಾಸ್ ನಲ್ಲಿ ಕುಳಿತು ನೋಡಿದ್ದಾರೆ. ಮಂಕಿ ಕ್ಯಾಪ್ ಹಾಕಿಕೊಂಡು ಯಾರಿಗೂ ತಿಳಿಯದ ರೀತಿ ಮಾರುವೇಷದಲ್ಲಿ ಸಿನಿಮಾ ನೋಡಿ ಬಂದಿದ್ದಾರೆ.

ಲುಂಗಿ ಹವಾಯ್ ಚಪ್ಪಲಿ ಮಂಕಿ ಕ್ಯಾಪ್ ಹಾಕಿ ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್ ಹೋಗಿಕೆಜಿಎಫ್ನೋಡಿದೆ. 38 ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದದ್ದು. ಹಾಗೇ ಹೋದದ್ದು ಸಾಮಾನ್ಯ ಜೀವನ ಏಂಜಾಯ್ ಮಾಡಲು. ಕಾರಾಪುರಿ ಟೀ ಮಧ್ಯಂತರದಲ್ಲಿ ಮಜಾ ನೀಡಿತು. ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ ಕಾರಣ ಏಕಾಂತ ವಾತಾವರಣ ಎಂದು ಜಗ್ಗೇಶ್ ಟ್ವಿಟ್ ಮಾಡಿದ್ದಾರೆ.

ಕೆಜಿಎಫ್ನನ್ನ ಪಕ್ಕ ಸುಮಾರು 17 ಪ್ರಾಯದ ಹುಡುಗ ಹೋಟೆಲ್ ಸರ್ವರ್ ಕೂತಿದ್ದ!. ಅವನ ಜೊತೆ ಧ್ವನಿ ಬದಲಾಯಿಸಿ ನಡುನಡುವೆ ಚರ್ಚಿಸುತ್ತಿದೆ. ಪ್ರತಿ ಪ್ರಶ್ನೆಗೆ ಅವನ ಉತ್ತರ ಚಿಂದಿ ಅನ್ನುತ್ತಿದ್ದ!. ಅವನು ಪಕ್ಕ ದರ್ಶನ ಫ್ಯಾನ್ ಅಂತೆ!. ಅವನು ಹೇಳಿದ ಮಾತು ಕಣ್ಣು ಒದ್ದೆಯಾಯಿತು!. ಕನ್ನಡ ಗೆಲ್ಲಬೇಕು ಸಾರ್. ಮಗಂದು ಬರಿ ಬೇರೆ ಭಾಷೆಗೆ ಜೈ ಅಂತಾರೆ ಈಗ ಅವರ ಪುಂಗಿಬಂದ್ ಅಂದ ಎಂದಿದ್ದಾರೆ.

2 ಅಕ್ಷರದ ನಟ 3 ಅಕ್ಷರದ ಮನಗಳ 2 ಅಕ್ಷರದಿಂದ ಕಲಾಸೇವೆಯಲ್ಲಿ ಸಾರ್ಥಕ ಸಾಧನೆ ಮಾಡಿಬಿಟ್ಟ hats off dear.. ಯಶ್ ಕನ್ನಡ ಮನಗಳ ಖುಷಿ ಪಡಿಸಿದ ನಿರ್ದೇಶಕ ನೀಲ್ ನೀನು ಅಸಮಾನ್ಯ ಪ್ರತಿಭೆ. ಕನ್ನಡವೆಂದರೆ ಇದ್ದ ತಾತ್ಸಾರ ಮನಸ್ಥಿತಿ ಬದಲಾಗುವಂತೆ ಮಾಡಿಬಿಟ್ಟಿರಿ. ಹೊಂಬಾಳೆ ಫಿಲ್ಮ್ಸ್ ನಿಮ್ಮ ಎದೆಗಾರಿಕೆಗೆ ನನ್ನ ಸಲಾಂ.. ‘ಕೆಜಿಎಫ್ನೋಡಿ ಖುಷ್ ಆದೆ ಎಂದು ಟ್ವಿಟ್ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: