ಪ್ರಮುಖ ಸುದ್ದಿಮೈಸೂರು

ವಚನಗಳು ರಾಷ್ಟ್ರಕ್ಕೆ ಅರ್ಪಿತವಾಗಬೇಕು : ಅರವಿಂದ ಜತ್ತಿ

ಮೈಸೂರು, ಡಿ.26 : ಲೋಕಾನುಭವ ಮತ್ತು ಶಿವಾನುಭವವದ ಸೂತ್ರವನ್ನು ಪ್ರತಿಪಾದಿಸುವ ವಚನಗಳು ರಾಷ್ಟ್ರಕ್ಕೆ ಅರ್ಪಿತವಾಗಬೇಕು ಎಂದು ಬೆಂಗಳೂರು ಬಸವಸಮಿತಿ ಅಧ್ಯಕ್ಷರಾದ ಅರವಿಂದಜತ್ತಿರವರು ಹೇಳಿದರು.

ನಂಜನಗೂಡು ತಾಲ್ಲೂಕು ಮಹದೇವತಾತರವರ ಐಕ್ಯಸ್ಥಳ ಸಂಗಮ ಕ್ಷೇತ್ರದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಹೊರತಂದಿರುವ 2019ರ ಶರಣು ದಿನಚರಿ ಬಿಡುಗಡೆ ಮಾಡಿ ಮಾತನಾಡಿದ ಅವರು ವಚನಗಳು ಬಸವಪ್ರಜ್ಙೆ, ವಚನ ಪ್ರಜ್ಞೆ ಮತ್ತು ಲಿಂಗ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಿದ್ದು. ದೆಹಲಿಯ ವಿಜ್ಷಾನ ಭವನದಲ್ಲಿ ರಾಷ್ಷ್ರದ ಪ್ರಧಾನಮಂತ್ರಿ ನರೇಂದ್ರಮೋದಿಯವರೊಂದಿಗೆ ಚರ್ಚೆ ಮಾಡಿದಾಗ ಅವರು ವಚನದಲ್ಲಿರುವ ಮೌಲ್ಯಗಳನ್ನು ಅರಿತು ವಿದೇಶಕ್ಕೆ ಹೋದಾಗಲೂ  ಒಂದು ವಚನವನ್ನು ಪ್ರಸ್ಥಾಪಿಸುತ್ತಿರುವುದು ವಚನಪ್ರಜ್ಞೆ ವಿಶ್ವಪ್ರಜ್ಞೆಯಾಗುತ್ತಿರುವುದಕ್ಕೆ ಸಾಕ್ಷಿ. ಇಂದು ಬಿಡುಗಡೆಯಾಗಿರುವ ಶರಣು ದಿನಚರಿಯಲ್ಲಿ ಇರುವಂತಹ ವಚನಗಳನ್ನು ಅಧ್ಯಯನ ಮಾಡಿ ಕೂಡಲಸಂಗಮದೇವ ಪದವನ್ನು ಅರ್ಥೈಸಿಕೊಂಡು ವಚನಗಳ ಪ್ರವೇಶ ಮಾಡಬೇಕು ಎಂದರು.

ಇಂದು ನಾವು ತ್ರಿವೇಣಿಸಂಗಮದಲ್ಲಿ ಸೇರಿದ್ದೇವೆ ಅದಕ್ಕೆ ಪೂರಕವಾಗಿ ತನು, ಮನದ ಜೊತೆಗೆ ಘನದ ಕಡೆ ಸಾಗಬೇಕು. ತನ್ನ ತಾನರಿತು ತಾನಾರೆಂದು ತಿಳಿದೊಡೆ ತಾನೆ ದೇವರು ನೋಡಾ ಎಂಬ ಶರಣರ ಇಂಗಿತವನ್ನು ಮನದಟ್ಟುಮಾಡಿಕೊಳ್ಳಬೇಕು ಎಂದರು.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು ಶ್ರೀ ಓಲೆಮಠದ ಡಾ. ಅಭಿನವ ಚನ್ನಬಸವಮಹಾಸ್ವಾಮಿಗಳು ಮುದೋಳ ತಾಲ್ಲೂಕು ಶ್ರೀ ಕಿರಿಟೇಶ್ವರ ಮಠದ ಸ್ವಾಮಿನಾಥಮಹಾಸ್ವಾಮಿಗಳು, ಚಾಮರಾಜನಗರ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮಿಗಳು, ಶ್ರೀ ಮಹಾದೇವತಾತ ಭಕ್ತಮಂಡಳಿಯ ಅಧ್ಯಕ್ಷರಾದ ಕೆ.ವಿ.ಮರಿಸ್ವಾಮಪ್ಪ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್‌ನ ದತ್ತಿದಾನಿಗಳು, ಆಜೀವ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: