ಸುದ್ದಿ ಸಂಕ್ಷಿಪ್ತ

ಶ್ರೀಕೃಷ್ಣ ಗಾನಸಭಾದ ಸಾಂಸ್ಕೃತಿಕ ಕಾರ್ಯಕ್ರಮಗಳು

ಮೈಸೂರು,ಡಿ.26 : ಗೋಕುಲಂ 3ನೇ ಹಂತದ ಶ್ರೀಕೃಷ್ಣ ಗಾನಸಭಾ ವತಿಯಿಂದ, ಶ್ರೀಕೃಷ್ಣ ದೇವಸ್ಥಾನದ ಆಳ್ವಾರ ಕಲಾಭವನದಲ್ಲಿ  ಆಯೋಜಿಸಿರುವ ಡಿಸೆಂಬರ್ ಮತ್ತು ಜನವರಿ ಮಾಹೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.

ಡಿ.27ರ ಸಂಜೆ 6 ಗಂಟೆಗೆ ವಿದುಷಿ ಮಿತ್ರ ನವೀನ ಮತ್ತು ಶಿಷ್ಯರಿಂದ ‘ಶ್ರೀಕೃಷ್ಣ ವಿಲಾಸ’ ನೃತ್ಯ ರೂಪಕ.

ಡಿ.28ರಂದು ಸಂಜೆ 6 ಗಂಟೆಗೆ ವಿದುಷಿ ಅಂಜನ ಪಿ.ರಾವ್ ಅವರ ಗಾಯನ,

ಜ.7ರ ಸಂಜೆ 6.30ಕ್ಕೆ ವಿದ್ವಾನ್ ಎನ್.ತ್ಯಾಗರಾಜನ್ ಮತ್ತು ವಿದ್ವಾನ್ ಆರ್.ಎನ್.ತಾರಾನಾಥ್ ಅವರಿಂದ ಕರ್ನಾಟಕ ಸಂಗೀತ ‘ಯುಗಳ ಗಾಯನ’.

ಜ.9ರ ಸಂಜೆ 6.30ಕ್ಕೆ ವಿದ್ವಾನ್ ಮೈಸೂರು ಎ ಚಂದನ್ ಕುಮಾರ್ ಅವರಿಂದ ವೇಣುವಾದನ. (ಕೆ.ಎಂ.ಆರ್)

Leave a Reply

comments

Related Articles

error: