ದೇಶ

ಕಂದಕಕ್ಕೆ ಉರುಳಿದ ಶಾಲಾ ಬಸ್: 35 ವಿದ್ಯಾರ್ಥಿಗಳಿಗೆ ಗಾಯ

ಲುಂಜ್(ಕಾಂಗ್ರಾ),ಡಿ.27-ಶಾಲಾ ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 35 ಮಕ್ಕಳು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ.

ಧರ್ಮಶಾಲಾದಿಂದ 37 ಕಿ.ಮೀ.ದೂರದಲ್ಲಿರುವ ಲುಂಜ್‌ಪಟ್ಟಣದಲ್ಲಿ ಅಪಘಾತ ಸಂಭವಿಸಿದ್ದು, ಶಾಲಾ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಬಸ್‌ನ ಕಿಟಕಿ ಬಾಗಿಲು ಒಡೆದುಹೋಗಿವೆ.

ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. (ಎಂ.ಎನ್)

Leave a Reply

comments

Related Articles

error: