ಪ್ರಮುಖ ಸುದ್ದಿಮೈಸೂರು

ಮೈಸೂರು ಡಿಸೈನರ್ಸ್ ಅಂಡ್ ಪ್ರಿಂಟರ್ಸ್ ಅಸೋಸಿಯೇಷನ್ ನಿಂದ ಕ್ಯಾಲೆಂಡರ್ ಬಿಡುಗಡೆ

ಮೈಸೂರು,ಡಿ.27 : ಮೈಸೂರು ಡಿಸೈನರ್ಸ್ ಅಂಡ್ ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ 2019ರ ನೂತನ ಸಾಲಿನ ದಿನದರ್ಶಿಕೆ ಬಿಡುಗಡೆಯನ್ನು ಇಂದು ಪತ್ರಕರ್ತರ ಭವನದಲ್ಲಿ ನೆರವೇರಿಸಲಾಯಿತು.

ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಸ್.ರಾಮಪ್ರಸಾದ್ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ನಂತರ ಮಾತನಾಡಿ ದಿನಿತ್ಯ ಕೆಲಸಗಳನ್ನು ವ್ಯವಸ್ಥಿತವಾಗಿ ಓರಣಗೊಳಿಸುವ ಈ ತಾರೀಖು ಪಟ್ಟಿಗೆ ಹಗಲು-ಇರುಳಿಗೆ ಇರುವಂತಹ ಯಾವುದೇ ನಿರ್ದಿಷ್ಟತೆ ಇಲ್ಲ, ವಾರ, ತಿಥಿಗಳಿಗೆ ಸಾಕ್ಷಿಗಳಿಲ್ಲ ಹೀಗಿದ್ದರೂ ವ್ಯವಸ್ಥಿತ ಜೀವನಕ್ಕೆ ದಿನಚರಿ ಹಾಗೂ ದಿನದರ್ಶಿಕೆ ಅವಶ್ಯ ಎಂದು ತಿಳಿಸಿದರು.

ಎಂಡಿಪಿಸಿ ನಿಕಟಪೂರ್ವ ಅಧ್ಯಕ್ಷ ಆರ್.ವಾಸುದೇವ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಎಂ.ಎಸ್.ರುದ್ರಸ್ವಾಮಿ, ಪದ್ಮಾವತಿ ಭಟ್ ಹಾಗೂ ರಾಮಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: