ಪ್ರಮುಖ ಸುದ್ದಿಮೈಸೂರು

ಡಿ.30ರಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿನಂದನಾ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ

ಮೈಸೂರು,ಡಿ.27 : ಮೈಸೂರು ವಿಭಾಗೀಯ ಕೇಂದ್ರ, ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ/ವರ್ಗದ ಅಧಿಕಾರಿಗಳು, ನೌಕರರ ಪರಿಷತ್ತು ವತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭ ಹಾಗೂ ಪುಸ್ತಕ ಲೋಕಾರ್ಪನೆಯನ್ನ ಡಿ. 30ರ ಬೆಳಗ್ಗೆ 10 ಗಂಟೆಗೆ ಮಾನಸಗಂಗೋತ್ರಿಯ ರಾಣಿಬಹದ್ದೂರು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪರಿಷತ್ತು ಅಧ್ಯಕ್ಷ ಶಾಂತರಾಜು ತಿಳಿಸಿದರು.

ಸಚಿವ ಆರ್.ಬಿ.ತಿಮ್ಮಪೂರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ನಿಡುಮಾಮಿಡಿ ಪೀಠಾಧ್ಯಕ್ಷ ಶ್ರೀವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು. ಅಧ್ಯಕ್ಷತೆಯನ್ನ ಸಂಸದ ಆರ್.ಧೃವನಾರಾಯಣ್ ವಹಿಸುವರು. ಶಾಸಕ ತನ್ವೀರ್ ಸೇಠ್ ಇರಲಿದ್ದು, ಪ್ರೊ.ಟಿ.ಎಂ.ಮಹೇಶ್ ಅವರ ‘ಕರ್ನಾಟಕ ರಾಜ್ಯದ ಅನ್ನಭಾಗ್ಯ ಯೋಜನೆ ಮತ್ತು ಆಹಾರ ಭದ್ರತೆ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೆರಿಯಾರ್ ವಾದಿಗಳಾದ ಕಲೈ ಸೆಲ್ವಿ ಅವರು ‘ಸಂವಿಧಾನದ ಆಶಯಗಳು ಮತ್ತು ಮೀಸಲಾತಿ’ ಬಗ್ಗೆ, ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌ ಅವರು ‘ಕರ್ನಾಟಕ ರಾಜ್ಯದ ಅನ್ನಭಾಗ್ಯ ಯೋಜನೆ ಮತ್ತು ಆಹಾರ ಭದ್ರತೆ ಕುರಿತು’ ಮಾತನಾಡಲಿದ್ದಾರೆ ಎಂದು ಹೇಳಿದರು.

ಪ್ರೊ.ಟಿ.ಎಂ.ಮಹೇಶ್, ಚಿಕ್ಕಂದಾನಿ, ಮಹದೇವ ಮೂರ್ತಿ, ಸುರೇಂದ್ರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: