ಮೈಸೂರು

ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಉಚಿತ ಕಣ್ಣಿನ ಮತ್ತು ದಂತ ತಪಾಸಣಾ ಶಿಬಿರ

ಮೈಸೂರು,ಡಿ.27:-  ಬಾಸುದೇವ ಸೋಮಾನಿ ಕಾಲೇಜಿನಲ್ಲಿ ರಾಷ್ಟ್ರೀಯಾ ಸೇವಾ ಯೋಜನೆ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂದು ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಹಾಗೂ ಸ್ಮೈಲ್ ಡೆಂಟಲ್ ಕ್ಲಿನಿಕ್ ಮತ್ತು ಓ.ಟಿ.ಕೇರ್ ಇವರಿಂದ ಕಣ್ಣಿನ ತಪಾಸಣೆ, ದಂತ, ಕಿವಿ ಮತ್ತು ಮೂಗಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಮಹದೇವಯ್ಯನವರು ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಾದ್ಯಾಪಕರಾದ ಪ್ರೊ.ಎನ್.ಎಸ್. ವೇಣುಗೋಪಾಲ್, ಡಾ.ಎಸ್.ಎಸ್.ರಾಜೇ ಅರಸ್, ಡಾ.ಹೆಚ್.ಪಿ.ಭವ್ಯ, ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಟಿ.ರಮೇಶ್. ವಿನಯ್ ಟಿ.ಎಂ, ಅನ್ನಪೂರ್ಣ ಅಸ್ಪತ್ರೆಯ ಸಂಯೋಜಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಕಾಲೇಜಿನ ಅಧ್ಯಾಪಕ, ಅಧ್ಯಾಪಕೇತರರು ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. (ಎಸ್.ಎಚ್)

Leave a Reply

comments

Related Articles

error: