ಮೈಸೂರು

ಶುಲ್ಕ ಹೆಚ್ಚಳಕ್ಕೆ ವಿರೋಧ; ಆಟೋ ಚಾಲಕ-ಮಾಲೀಕರ ಸಂಘದಿಂದ ನಾಳೆ ಕಾಲ್ನಡಿಗೆ ಜಾಥಾ

ಸಂಯುಕ್ತ ಕರ್ನಾಟಕ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘವು ಜನವರಿ 11 ರ ಬೆ.11 ಗಂಟೆಗೆ ಸಾರಿಗೆ ಇಲಾಖೆಯ ವಿವಿಧ ಶುಲ್ಕಗಳನ್ನು ಏಕಾಏಕಿ ಏರಿಸಿ ಆದೇಶ ಮಾಡಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಸಾರಿಗೆ ಇಲಾಖೆಯಲ್ಲಿ ಸಾರ್ವಜನಿಕರು ಪಡೆದುಕೊಳ್ಳುತ್ತಿರುವ ವಿವಿಧ ಸೇವೆಗಳಿಗೆ ಶುಲ್ಕ ಹೆಚ್ಚಿಸಿ ಸಾರ್ವಜನಿಕರು ಹಾಗೂ ಬಡ ಕೂಲಿ ಕಾರ್ಮಿಕರಿಗೆ ಬರೆ ಹಾಕಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಸದರಿ ಶುಲ್ಕಗಳನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಸಂಘದ ಅಧ‍್ಯಕ್ಷ ಎಂ.ವಿ.ಶ್ರೀನಿವಾಸಮಿತ್ರ ತಿಳಿಸಿದ್ದಾರೆ.

Leave a Reply

comments

Related Articles

error: