ಲೈಫ್ & ಸ್ಟೈಲ್

ತಲೆಹೊಟ್ಟು ನಿರ್ಲಕ್ಷ್ಯ ಬೇಡ

ಕೆಲವರಿಗೆ ತಲೆಹೊಟ್ಟು ಸಮಸ್ಯೆ ಇರುತ್ತದೆ. ಚಳಿಗಾಲದಲ್ಲಿ ಶರೀರದಲ್ಲಿನ ತೇವಾಂಶದ ಕೊರತೆಯಿಂದ ಇದು ಮತ್ತಷ್ಟು ಹೆಚ್ಚಲಿದೆ. ಜೊತೆಗೆ ಧೂಳು, ಮಾಲಿನ್ಯಗಳಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಸರಿಯಾದ ಸಮಯದಲ್ಲಿ ಅದಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ ಕೇವಲ ಕೂದಲುದುರುವುದಷ್ಟೇ ಅಲ್ಲ, ಶರೀರದ ಕೆಲವು ಭಾಗಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ.

pimpleಮೊಡವೆ: ತಲೆಹೊಟ್ಟು ಮುಖದ ಮೇಲೆ ಬೀಳಲು ಆರಂಭಿಸಿದರೆ ಮುಖದಲ್ಲಿ ಮೊಡವೆಯ ಸಮಸ್ಯೆ ಹೆಚ್ಚಾಗಲಿದೆ.

rednessಕೆಂಪು ತ್ವಚೆ : ತಲೆಹೊಟ್ಟು ತ್ವಚೆಯ ಮೇಲೆ ಅಲರ್ಜಿಯನ್ನುಂಟು ಮಾಡಲಿದೆ. ಇದರಿಂದ ತ್ವಚೆ ಕೆಂಪಗಾಗಲಿದೆ.

eyeಕಣ್ಣಿನ ಅಲರ್ಜಿ: ತಲೆಹೊಟ್ಟು ಕಣ್ಣುಗಳಲ್ಲಿ ಸೇರಿದಾಗ ಇದರಲ್ಲಿರುವ ಬ್ಯಾಕ್ಟಿರೀಯಾಗಳು ಕಣ್ಣಿನಲ್ಲಿ ತುರಿಕೆಯನ್ನುಂಟು ಮಾಡುತ್ತವೆ. ಅಷ್ಟೇ ಅಲ್ಲದೆ ಕೆಂಪಗಾಗುವುದು ಮತ್ತು ಅಲರ್ಜಿಯನ್ನುಂಟು ಮಾಡಲಿದೆ.

turikeತುರಿಕೆ : ತಲೆಹೊಟ್ಟಿನಿಂದ ತಲೆಯಲ್ಲಿ ಕೂದಲುಗಳ ತಳಭಾಗದಲ್ಲಿ ಅಲರ್ಜಿಯುಂಟಾಗಿ ತುರಿಕೆ ಆರಂಭವಾಗುತ್ತದೆ.

ತಲೆಹೊಟ್ಟು ಕಡಿಮೆ ಮಾಡಲು ಕೆಲವು ಪರಿಹಾರಗಳು

olive-oilಆಲಿವ್ ಆಯಿಲ್ : ರಾತ್ರಿ ಮಲಗುವ ಮುನ್ನ ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಬೇಕು. ಬೆಳಿಗ್ಗೆ ಒಂದು ಚಮಚ ಲಿಂಬು ನೀರಿನ್ನು ತಲೆಗೆ ಹಚ್ಚಿ ನಂತರ ಸ್ನಾನ ಮಾಡಬೇಕು.

neemಬೇವಿನ ಎಲೆ : ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಬಿಸಿ ನೀರಿನಲ್ಲಿ  15-20ಬೇವಿನ ಎಲೆಯನ್ನು ಹಾಕಿಡಿ ಬೆಳಿಗ್ಗೆ ಎದ್ದು ಅದನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಳ್ಳಿ.

ಇವುಗಳನ್ನು ಪಾಲಿಸಿದಲ್ಲಿ ತಲೆಹೊಟ್ಟು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.

Leave a Reply

comments

Related Articles

error: