ಮೈಸೂರು

ಡಿ.30 :  ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಪ್ರಾಂತೀಯ ಸಮಾವೇಶ

ಮೈಸೂರು, ಡಿ.27:- ನಗರದ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಜಿಲ್ಲೆ 317ಎ ಇವರ ವತಿಯಿಂದ ಡಿ.30ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಾಂತೀಯ 10ರ ಸಮಾವೇಶವನ್ನು ವಿಶ್ವೇಶ್ವರನಗರದ ರಾಹುಲ್ ಕನ್ವೆನ್ಶನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಪಾವಗಡದ ಸ್ವಾಮಿ ವಿವೇಕಾನಂದ ಗ್ರ್ರಾಮೀಣ ಆರೋಗ್ಯ ಸಂಸ್ಥೆಯ ಸಂಸ್ಥಾಪಕ ಸ್ವಾಮಿ ಶ್ರೀ ಜಪಾನಂದಜೀಯವರು ‘ಸೇವೆ ಮತ್ತು ಆಧ್ಯಾತ್ಮ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರಿನ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂತೀಯ ಅಧ್ಯಕ್ಷ ಲಯನ್ ಎಸ್.ಸುರೇಶ್ ಬಾಬು ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಲಯನ್ ವಿ.ರೇಣುಕುಮಾರ್, ಒಂದನೇ ಉಪ ಜಿಲ್ಲಾ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ, ಎರಡನೇ ಜಿಲ್ಲಾ ಉಪ ರಾಜ್ಯಪಾಲ ಲಯನ್ ಡಾ.ಜಿ.ಎ.ರಮೇಶ್, ಅತಿಥೇಯ ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಕೆ.ಎಸ್.ದ್ವಾರಕಾನಾಥ್ ಹಾಗೂ ಜಿಲ್ಲಾ ಸಂಪುಟ ಕೋಶಾಧ್ಯಕ್ಷ ಲಯನ್ ಕೆ.ಈಶ್ವರನ್ ಉಪಸ್ಥಿತರಿರುತ್ತಾರೆ. ಅತಿಥೇಯ ಸಮಿತಿ ಅಧ್ಯಕ್ಷ ಲಯನ್ ವೆಂಕಟೇಶ್ ಪ್ರಸಾದ್‍ ಅವರು ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾರೆ ಎಂದು ಕೋಶಾಧ್ಯಕ್ಷ ಲಯನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ) ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: