ಪ್ರಮುಖ ಸುದ್ದಿಮೈಸೂರು

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ : ಮೈಸೂರಿನ ಮುಡಾದ ಕಿರಿಯ ಇಂಜಿನಿಯರ್ ಗೂ ಶಾಕ್ ನೀಡಿದ ಅಧಿಕಾರಿಗಳು

ರಾಜ್ಯ(ಬೆಂಗಳೂರು)ಡಿ.28:- ಎಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ರಾಜ್ಯದ 17 ಕಡೆ ಇರುವ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.

ಐದು ವಿಶೇಷ ತಂಡದ ಅಧಿಕಾರಿಗಳು ಬೆಂಗಳೂರು, ಚಿಂತಾಮಣಿ, ಹುಣಸೂರು, ಉಡುಪಿ, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಕಾರವಾರ, ಮಂಗಳೂರು ಸೇರಿದಂತೆ ಒಟ್ಟು 17 ಕಡೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚುವರಿ ನೋಂದಣಿ ಅಧಿಕಾರಿ ಆರ್​. ಶ್ರೀಧರ್​, ಸಹಕಾರ ಸಂಘ, ಬಿಬಿಎಂಪಿ ನಗರ ಯೋಜನೆಯ ಹೆಚ್ಚುವರಿ ನಿರ್ದೇಶಕ ಬೆಸ್ತಪ್ಪ, ದಾವಣಗೆರೆ ಕೃಷಿ ಇಲಾಖೆ ಉಪ ನಿರ್ದೇಶಕಿ ಹಂಸವೇಣಿ ಅವರ ಸಿದ್ದವೀರಪ್ಪ ಲೇ ಔಟ್‌ ನಿವಾಸದ ಮೇಲೆ, ಮೈಸೂರಿನ ಮುಡಾದ ಕಿರಿಯ ಇಂಜಿನಿಯರ್​ ಕೆ.ಮಣಿ, ಮಂಗಳೂರಿನ ಸರಕಾರಿ ಶಿಕ್ಷಕರ ಕಾಲೇಜಿನ ರೀಡರ್​ ಡಿ. ಮಂಜುನಾಥಯ್ಯ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: