ದೇಶ

ಮುಂಬೈ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: ಐವರ ದುರ್ಮರಣ

ಮುಂಬೈ,ಡಿ.28- ಬಹುಮಹಡಿ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಚೆಂಬೂರ್ ತಿಲಕ್ನಗರ್ಪ್ರದೇಶದ ಗಣೇಶ್ಗಾರ್ಡನ್ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದಿದೆ.

ಒಂದೇ ಮನೆಯಲ್ಲಿ ಸಿಲುಕಿ ಸುಟ್ಟ ಗಾಯಗಳಿಗೊಳಗಾದ ಸುನೀತಾ ಜೋಷಿ (72), ಬಾಲಚಂದ್ರನ್ಜೋಷಿ(72), ಸುಮನ್ಶ್ರೀನಿವಾಸನ್ಜೋಷಿ (83), ಸರಳಾ ಸುರೇಶ್ಗಂಗರ್‌(52) ಮತ್ತು ಲಕ್ಷ್ಮಿ ಬೆನ್ಪ್ರೇಮ್ಜಿ ಗಂಗರ್‌(83) ಮೃತ ದುರ್ದೈವಿಗಳು.

ಗಂಭೀರವಾಗಿ ಸುಟ್ಟ ಗಾಯಗಳಿಗೊಳಗಾಗಿದ್ದ ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

16 ಅಂತಸ್ಥಿನ ಕಟ್ಟಡದ 11 ನೇ ಅಂತಸ್ಥಿನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿತ್ತು. ವಿಷಯ ತಿಳಿದು 15 ಕ್ಕೂ ಹೆಚ್ಚು ಅಗ್ನಿಶಾಮಕದಳದ ವಾಹನಗಳೊಂದಿಗೆ ಸಿಬಂದಿಗಳು ಆಗಮಿಸಿ ರಕ್ಷಣಾ ಕಾರ್ಯ ನಡೆಸಿ ಬೆಂಕಿಯನ್ನು ತಹಬದಿಗೆ ತಂದರು. ಬೆಂಕಿ ಕಾಣಿಸಿಕೊಳ್ಳುವ ಮುನ್ನ ಸ್ಫೋಟದ ಸದ್ದು ಕೇಳಿ ಬಂದಿದ್ದು ಗ್ಯಾಸ್ಸಿಲಿಂಡರ್ಸಿಡಿದು ಅವಘಡ ಸಂಭವಿಸಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯದ ವೇಳೆ ಓರ್ವ ಅಗ್ನಿ ಶಾಮಕ ದಳದ ಸಿಬಂದಿಯೂ ಗಾಯಗೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: