ಪ್ರಮುಖ ಸುದ್ದಿ

ಜೈಲು ಶಿಕ್ಷೆಗೆ ಒಳಗಾದ ಅಪರಾಧಿಗಳ ಜೊತೆ ಎ ಎಸ್ ಐ ಡ್ಯಾನ್ಸ್

ರಾಜ್ಯ(ಹುಬ್ಬಳ್ಳಿ)ಡಿ.28:- ಜೈಲಿನಲ್ಲಿ ಗಲಾಟೆ ಮಾಡಿ ಜೈಲು ಶಿಕ್ಷೆಗೆ ಒಳಗಾದ  ಅಪರಾಧಿಗಳ(ರೌಡಿ ಶೀಟರ್ ಗಳ) ಜೊತೆ ಎ ಎಸ್ ಐ ಓರ್ವರು ಫುಲ್ ಡ್ಯಾನ್ಸ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಅಶೋಕ ನಗರ ಎಎಸ್ ಐ, ಎಂ.ಕೆ.ದೇಸಾಯಿ ಎಂಬವರೇ ಅಪರಾಧಿಗಳ ಜೊತೆ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ.ಕುಡಿದ ಮತ್ತಲ್ಲಿ ಕೋರ್ಟ್  ನಿಂದ ಅಪರಾಧ ಸಾಬೀತಾದವರ ಜೊತೆ ಹುಬ್ಬಳ್ಳಿ ಹೊರವಲಯದಲ್ಲಿ ಕುಡಿದು  ನಡುರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಸಬ್ ಜೈಲ್ ಗಲಾಟೆ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ದುರ್ಗಪ್ಪ ಬಿಜವಾಡ ಹಾಗೂ ಶಿವರಾಜ್ ಗೌರಿ ಜೊತೆ ಡ್ಯಾನ್ಸ್ ಮಾಡಿದ್ದಾರೆ.  ಡಿ.16 ರಂದು ಹುಬ್ಬಳ್ಳಿಯ ಸೆಷನ್ಸ್ ನ್ಯಾಯಲಯ್ ಇವರ ವಿರುದ್ದ ತೀರ್ಪು ನೀಡಿತ್ತು. ಮೂರು ವರ್ಷ ಜೈಲು 5 ಸಾವಿರ ದಂಡ ವಿಧಿಸಿ ಬೇಲ್ ನೀಡಿತ್ತು. ಅದೇ ಜೈಲು ಶಿಕ್ಷೆಗೊಳಗಾದ ಅಪರಾಧಿಗಳ ಜೊತೆ ಎ ಎಸ್ ಐ ಡ್ಯಾನ್ಸ್ ಮಾಡಿದ್ದಾರೆ.  ಇದೇ ಅಶೋಕ ನಗರ  ಪೊಲೀಸರಿಂದ ಚಾಜ್೯ ಶೀಟ್ ಸಲ್ಲಿಕೆ ಮಾಡಿದ್ದರಿಂದ  ಕೋರ್ಟ್ ನಿಂದ  ಶಿಕ್ಷೆಯಾಗಿತ್ತು.‌ ಆದರೆ ಇದೀಗ ಅದೇ ಠಾಣೆಯ ಎ ಎಸ್ ಐ ಹುಬ್ಬಳ್ಳಿಯ ಹೊರವಲಯದ ರಸ್ತೆ ಮಧ್ಯೆದಲ್ಲಿ ಫುಲ್ ಡ್ಯಾನ್ಸ್ ಮಾಡಿದ್ದು ತೀವ್ರ ಚರ್ಚೆಗೆ ಗುರಿಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: