ಮೈಸೂರು

ಅಪರಾಧ ತಡೆ ಮಾಸಾಚರಣೆ : ಕರಪತ್ರ ನೀಡಿ ಅರಿವು

ಮೈಸೂರು,ಡಿ.28:- ಮೈಸೂರು ನಗರ ಸಂಚಾರಿ ಪೊಲೀಸ್ ಹಾಗೂ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಯನ್ನು ಇಂದು ಆಚರಿಸಲಾಯಿತು.

ನಗರದ ಕೋಟೆ ಆಂಜನೇಯನ ಸ್ವಾಮೀ ದೇವಸ್ಥಾನದ ಮುಂಭಾಗದಿಂದ ಮೈಸೂರಿನ ಹಲವು ಶಾಲೆಯ ನೂರಾರು  ಮಕ್ಕಳು ಅಪರಾಧ ತಡೆ ಮಾಸಾಚರಣೆ ಮತ್ತು ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದರು.

ಜಾಗೃತಿ ಜಾಥಾಕ್ಕೆ ಡಿಸಿಪಿ ಡಾ.ವಿಕ್ರಂ ಆಮಟೆ ಚಾಲನೆ ನೀಡಿದರು. ಕೋಟೆ ಆಂಜನೇಯ ಸ್ವಾಮೀ ದೇವಸ್ಥಾನದಿಂದ ಹೊರಟ ಜಾಥಾವು ಕೆಆರ್ ವೃತ್ತದಿಂದ ಸಯ್ಯಾಜಿರಾವ್ ರಸ್ತೆ , ಕೆಆರ್ ಎಸ್ ಆಸ್ಪತ್ರೆ ಸೇರಿದಂತೆ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: