ಕ್ರೀಡೆ

ಕಮಿನ್ಸ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ: 32/4

ಮೆಲ್ಬೋರ್ನ್,ಡಿ.28-ಆಸೀಸ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದೆ.

ಮೊದಲ ಇನ್ನಿಂಗ್ಸ್ನಲ್ಲಿ 292 ರನ್ ಮುನ್ನಡೆ ಪಡೆದುಕೊಂಡಿರುವ ಹೊರತಾಗಿಯೂ ಟೀಂ ಇಂಡಿಯಾ 32 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಭಾರತದ ಆರಂಭ ನಿರೀಕ್ಷಿಸಿದಷ್ಟು ಉತ್ತಮವಾಗಿರಲಿಲ್ಲ. ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ದಾಳಿಗೆ ತತ್ತರಿಸಿದ ಭಾರತದ ಆಟಗಾರರು ಪೆವಿಲಿಯನ್ ನತ್ತ ಪೆರೇಡ್ ನಡೆಸಿದರು.

ಹನಮ ವಿಹಾರಿಗೆ (13) ಕ್ರೀಸಿನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್ ಶತಕವೀರ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು. ಉಪನಾಯಕ ಅಜಿಂಕ್ಯ ರಹಾನೆ (1) ರನ್ ಗಳಿಸಿ ಔಟ್ ಆದರು. (ಎಂ.ಎನ್)

Leave a Reply

comments

Related Articles

error: