ಮೈಸೂರು

ಪಕ್ಷಿಯ ಕುರಿತು ಸಂಪೂರ್ಣ ಮಾಹಿತಿ ಅರಿತಾಗ ಪಕ್ಷಿವೀಕ್ಷಣೆ ಮಾಡಿದ್ದು ಸಾರ್ಥಕ : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಪಕ್ಷಿ ಉತ್ಸವಕ್ಕೆ ಚಾಲನೆ

ಮೈಸೂರು,ಡಿ.28: – ಕೇವಲ ಪಕ್ಷಿ ವೀಕ್ಷಣೆ ಮಾಡುವುದಲ್ಲ. ಅದರ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದು ಅರಿತುಕೊಂಡಾಗ ಮಾತ್ರ ನೀವು ಪಕ್ಷಿ ವೀಕ್ಷಣೆ ನಡೆಸಿದ್ದೂ ಸಾರ್ಥಕವಾಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಅವರಿಂದು ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಮಾಗಿ ಉತ್ಸವ ಪ್ರಯುಕ್ತ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ಪಕ್ಷಿ ಉತ್ಸವಕ್ಕೆ ಚಾಲನೆ ನೀಡಿದರು. ಕಡಿಮೆ ಅವಧಿಯಲ್ಲಿ ಈ ತರಹ ಕಾರ್ಯಕ್ರಮವನ್ನು ಮಾಡಬೇಕೆಂದುಕೊಂಡು ಮಾಡಿದ್ದೇವೆ. ಇದು ಯಾವುದೇ ರೀತಿಯ ವಾಣಿಜ್ಯೀಕರಣ ಚಟುವಟಿಕೆ ಆಗಬಾರದು ಎಂಬುದೇ ನಮ್ಮ ಉದ್ದೇಶವಾಗಿತ್ತು. ನೇಚರ್ ಸಂಸ್ಥೆ ಯಾವುದೇ ಹಣವನ್ನು ಮುಟ್ಟಲ್ಲ. ಈ ಕುರಿತು ಸಂಸ್ಥೆಯ ಮುಖ್ಯಸ್ಥರನ್ನು ಕೇಳಿದಾಗ ಅವರು ಒಪ್ಪಿಕೊಂಡರು.  ಪಕ್ಷಿ ನೋಡಬೇಕು, ಅದರ ಬಗ್ಗೆ ಅಧ್ಯಯನ ಮಾಡಬೇಕು, ದಾಖಲೆ ಸಂಗ್ರಹಿಸಬೇಕು. ಆಗ ಕಾರ್ಯಕ್ರಮ ಮಾಡಿದ್ದಕ್ಕೂ ಸಾರ್ಥಕವಾಗಲಿದೆ. 200ರೂ.ಕೊಟ್ಟು ನೋಂದಣಿ ಮಾಡಿಸಿಕೊಂಡವರು ಹಲವರು ಅವರಲ್ಲಿ ನೂರು ಮಂದಿ ಆಯ್ಕೆ ಮಾಡಿ ಆರು ತಂಡ ರಚಿಸಲಾಗಿದೆ. ಮತ್ತೂ ಕೆಲವರು ತಾವೂ ಬರುತ್ತೇವೆ ನೋಂದಣಿ ಮಾಡಿಕೊಳ್ಳಿ ಎಂದರು. ಅದರಲ್ಲಿ ಐವತ್ತು ಮಂದಿ ಶಾಲಾ ವಿದ್ಯಾರ್ಥಿಗಳೇ ಇದ್ದರು. ಅದಲ್ಲದೇ ಬೇರೆ, ಬೇರೆ ಜಿಲ್ಲೆಯವರೂ ನೋಂದಣಿ ಕೇಳಿದ್ದರು ಎಂದರು. ಮೃಗಾಲಯದಿಂದಲೂ ಈ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ದೊರಕಿದೆ.ಮುಂದಿನ ವರ್ಷ ಇನ್ನೂ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡುತ್ತೇವೆ. ಆಗಲೂ ನಿಮ್ಮ ಬೆಂಬಲ ಹೀಗೆಯೇ ಇರಲಿ ಎಂದು ತಿಳಿಸಿದರು.

ಹಣ ಕೊಟ್ಟಿದ್ದೇವೆ ಎಂದು ಬಂದು ಸಮಯ ಕಳೆದು ಹೋಗಬಾರದು ಪಕ್ಷಿಗಳ ಕುರಿತು ಸಂಪೂರ್ಣ ಅಧ್ಯಯನ ನಡೆಸಿ ಡಾಕ್ಯುಮೆಂಟರಿ ಸಿದ್ಧಪಡಿಸಬೇಕು ಆಗ ನೀವಿಲ್ಲಿ ಬಂದು ಕಾಲ ಕಳೆದಿದ್ದಕ್ಕೂ ಸಾರ್ಥಕವಾಗಲಿದೆ ಎಮದು ತಿಳಿಸಿದರು.

ಈ ಸಂದರ್ಭ ಮೈಸೂರು ನೇಚರ್ ಕ್ಲಬ್ ನ ಶಿವಪ್ರಕಾಶ್, ಮೃಗಾಲಯದ ಉಪನಿರ್ದೇಶಕ ಹೆಚ್.ಪಿ.ಮಂಜುನಾಥ್, ಮೈಸೂರು ಉಪವಿಭಾಗದ ಆರೋಗ್ಯಾಧಿಕಾರಿ ಸಿದ್ದರಾಮಪ್ಪ ಉಪಸ್ಥಿತರಿದ್ದರು.

2ದಿನಗಳ ಕಾಲ ಮೈಸೂರು ಮೃಗಾಲಯದಲ್ಲಿ ಪಕ್ಷಿ ಪ್ರಿಯರು ಹಾಗೂ ತಜ್ಞರಿಂದ  ಸಂವಾದ ಕಾರ್ಯಕ್ರಮ  ನಡೆಯಲಿದ್ದು, ಮೈಸೂರಿನ 6ಕೆರೆಗಳಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪಕ್ಷಿ ಉತ್ಸವದಲ್ಲಿ ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಲಿಂಗಾಂಬುಧಿ ಕೆರೆ ಹಾಗೂ ಗಿರಿ ಬೆಟ್ಟ ದಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶವಿದ್ದು, ಸಂಜೆ 3ಗಂಟೆಯಿಂದ 6ರ ತನಕ ಪಕ್ಷಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: