ಕರ್ನಾಟಕಪ್ರಮುಖ ಸುದ್ದಿಮೈಸೂರು

ಅಧಿಕಾರಿಗಳು ಸೇವಿಸುವ ಆಹಾರವನ್ನೇ ಸೈನಿಕರಿಗೂ ನೀಡಲಾಗುತ್ತದೆ : ಸಚಿವ ವಿ.ಕೆ.ಸಿಂಗ್

ಸೇನೆಯಲ್ಲಿ ಊಟ ಎನ್ನುವುದು ಬಹಳ ಮುಖ್ಯ ವಿಚಾರವಾಗಿದ್ದು, ಅಧಿಕಾರಿಗಳು ಏನು ತಿನ್ನುತ್ತಾರೋ ಅದನ್ನೇ ಸೈನಿಕರಿಗೂ ನೀಡುತ್ತಾರೆ ಎಂದು ಹೇಳುವ ಮೂಲಕ ನಿವೃತ್ತ ಸೇನಾ ಮುಖ್ಯಸ್ಥ ಹಾಗೂ ರಾಜ್ಯ ವಿದೇಶಾಂಗ ವ್ಯವಹಾರಗಳ ಕೆಂದ್ರ ಸಚಿವ ವಿ.ಕೆ.ಸಿಂಗ್, ಬಿಎಸ್‌ಎಫ್ ಯೋಧನ ಆರೋಪವನ್ನು ನಯವಾಗಿ ತಳ್ಳಿ ಹಾಕಿದ್ದಾರೆ.

ಮೈಸೂರಿನಲ್ಲಿ ಬಿಎಸ್‌ಎಫ್ ಯೋಧ ಕಳಪೆ ಊಟ ನೀಡುತ್ತಿರುವ ಬಗ್ಗೆ ವಿಡಿಯೋ ಅಪ್‌ಲೋಡ್ ಮಾಡಿರುವ ಪ್ರಕರಣಕ್ಕೆಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸೈನಿಕನ ಆರೋಪವನ್ನು ತಳ್ಳಿಹಾಕಿದ್ದಾರೆ. ಸದ್ಯದ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಅಂತಹ ಘಟನೆ ನಡೆದಿದ್ದರೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಸದ್ಯ ಹರಿದಾಡುತ್ತಿರುವ ದೃಶ್ಯದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು ಎಲ್ಲ ಕಡೆ ಬಿಜೆಪಿ ಪಕ್ಷ ಉತ್ತಮ ಸ್ಥಿತಿಯಲ್ಲಿದೆ. ಉತ್ತರ ಪ್ರದೇಶದಲ್ಲಿ ಏನಾಗಲಿದೆ ಎನ್ನುವುದನ್ನು ಫಲಿತಾಂಶ ಬಂದ ಮೇಲೆ ಹೇಳುತ್ತೇನೆ. ಚುನಾವಣೆಗೆ ಸಮಯ ಇರುವುದರಿಂದ ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ ಎಂದರು. ಪ್ರವಾಸಿ ಭಾರತೀಯ ದಿವಸ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ‌. ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಬೆಂಗಳೂರಿನಲ್ಲಿ ಆಯೋಜನೆ ಉತ್ತಮವಾಗಿತ್ತು ಎಂದು ತಿಳಿಸಿದರು.

Leave a Reply

comments

Related Articles

error: