ದೇಶಪ್ರಮುಖ ಸುದ್ದಿ

ಕಾಶ್ಮೀರ: 65ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಜಮ್ಮು (ಡಿ.28): ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲಾಸ್ಪತ್ರೆಯಲ್ಲಿ 65 ವರ್ಷದ ಕಾಶ್ಮೀರಿ ಮಹಿಳೆಯೊಬ್ಬರು ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿನ 80 ವರ್ಷದ ತಂದೆ ಈ ‘ಅಮೂಲ್ಯ ಉಡುಗೊರೆ’ಗಾಗಿ ಅಲ್ಲಾಹ್ ನಿಗೆ ಧನ್ಯವಾದ ಹೇಳಿದ್ದಾರೆ.

ಸಾಮಾನ್ಯವಾಗಿ ಭಾರತದಲ್ಲಿ ಮಹಿಳೆಯರು ಸರಾಸರಿ 47 ವರ್ಷದವರಾದಾಗ ಅವರಿಗೆ ಋತುಬಂಧವಾಗುತ್ತದೆ. ನಂತರ ಮಗುವಾಗುವ ಸಾಧ್ಯತೆಯೇ ಇಲ್ಲ. ಆದರೆ ಇದೊಂದು ಅಪರೂಪದ ಪ್ರಕರಣ” ಎಂದು ಕಾಶ್ಮೀರದ ಪ್ರಸೂತಿ ತಜ್ಞರೊಬ್ಬರು ಹೇಳಿದ್ದಾರೆ. ಸಾಮಾನ್ಯವಾಗಿ 50 ವರ್ಷ ದಾಟಿದ ಮಹಿಳೆಯರು ಐವಿಎಫ್ ತಂತ್ರಜ್ಞಾನದ ಮೂಲಕ ಮಗು ಪಡೆಯುತ್ತಾರೆ. ಆದರೆ ಈ ಮಹಿಳೆಯ ಹೇಳಿಕೆಗಳು ನಿಜವೆಂದಾದರೆ ನೈಸರ್ಗಿಕವಾಗಿ ಮಗುವಿಗೆ ಜನ್ಮ ನೀಡಿದ ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಈಕೆ.

ಸದ್ಯ ಜಗತ್ತಿನಲ್ಲಿ ಅತ್ಯಂತ ಹಿರಿಯ ವಯಸ್ಸಿನಲ್ಲಿ ತಾಯಿಯಾದವರು ಸ್ಪೇನ್ ದೇಶದ ಮರಿಯಾ ಡೆಲ್ ಕಾರ್ಮೆನ್ ಬೌಸದ ಡೆ ಲಾರಾ ಆಗಿದ್ದು ಆಕೆ 66 ವರ್ಷದವಳಾಗಿದ್ದಾಗ ಐವಿಎಫ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು.

ಹೆರಿಗೆ ನೋವು ಆರಂಭಗೊಂಡ ಹಿನ್ನೆಲೆಯಲ್ಲಿ ಮಹಿಳೆಯನ್ನು ಬುಧವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪರಾಹ್ನದ ವೇಳೆ ಆಕೆಗೆ ಹೆರಿಗೆಯಾಗಿತ್ತು, ದಂಪತಿಗೆ ಈಗಾಗಲೇ 10 ವರ್ಷ ವಯಸ್ಸಿನ ಮಗನಿದ್ದಾನೆ. ಮಗುವಿನ ತಂದೆ ಹಕೀಂ ದಿನ್ ತಮಗೆ ಮಗುವನ್ನು ಸಾಕಿ, ಸಲಹಿ ಬೆಳೆಸಲು ಸರಕಾರದ ಸಹಾಯ ಬೇಕಾಗುವುದು ಎಂದಿದ್ದಾರೆ. (ಎನ್.ಬಿ)

Leave a Reply

comments

Related Articles

error: