ಮೈಸೂರು

ಏಕನೀತಿ ಶಿಕ್ಷಣ ಪದ್ಧತಿ ಜಾರಿಗೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹ

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2017ನೇ ಸಾಲಿನ ದಿನದರ್ಶಿಕೆಯನ್ನು ಮಂಗಳವಾರ ಪತ್ರಕರ್ತರ ಭವನದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ತಾರತಮ್ಯ ನೀತಿಯಿದ್ದು ಸರ್ಕಾರ ಈ ಕೂಡಲೇ ಏಕನೀತಿ ಶಿಕ್ಷಣ ಪದ್ದತಿಯನ್ನು ಜಾರಿಗೊಳಿಸಬೇಕು. ಸರ್ಕಾರವು ಅನುದಾನಿತ ಶಾಲಾ ಶಿಕ್ಷಕರಿಗಷ್ಟೇ ಅಲ್ಲ. ಮಕ್ಕಳಲ್ಲಿಯೂ ತಾರತಮ್ಯ ಧೋರಣೆಯನ್ನು ಸರ್ಕಾರ ತೋರುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಪ್ರವಾಸ, ಶೂ, ಪುಸ್ತಕ, ಸಮವಸ್ತ್ರ — ಹೀಗೆ ಹಲವಾರು ಸವಲತ್ತುಗಳನ್ನು ನೀಡಲಾತ್ತಿದೆ. ಆದರೆ ಅನುದಾನಿತ ಶಾಲಾ ಮಕ್ಕಳಿಗೆ ಕೇವಲ ಅಕ್ಷರ ದಾಸೋಹ ಹಾಗೂ ಕ್ಷೀರಭಾಗ್ಯವನ್ನಷ್ಟೇ ನೀಡುತ್ತಿದ್ದು ಮುಂದಿನ ಸಾಲಿನಿಂದಲೇ ಸರ್ಕಾರಿ ಶಾಲಾ ಮಕ್ಕಳಿಗಿರುವ ಎಲ್ಲಾ ಸವಲತ್ತನ್ನು ಅನುದಾನಿತ ಶಾಲಾ ಮಕ್ಕಳಿಗೆ ನೀಡಬೇಕೆಂದು ಒತ್ತಾಯಿಸಿದರು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ತಾರತಮ್ಯ ನೀತಿಯನ್ನು ತೊಲಗಿಸಿ ಏಕನೀತಿ ಶಿಕ್ಷಣ ಪದ್ಧತಿಯನ್ನು ಪ್ರಸಕ್ತ ಸಾಲಿನಿಂದಲೇ ಜಾರಿಗೊಳಿಸಬೇಕೆಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾರ್ಯಕ್ರಮದಲ್ಲಿ ಒತ್ತಾಯಿಸಿದರು.

ಈ ಸಂದರ್ಭ ಸಂಘದಿಂದ ಹಲವಾರು ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರವನ್ನು ಶಾಸಕರಿಗೆ ಸಂಘದಿಂದ ನೀಡಲಾಯಿತು.

ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಕೆ.ಜಿ, ಸಂಘದ ಜಿಲ್ಲಾಧ್ಯಕ್ಷ ಟಿ.ಪಿ. ನಂದೀಶ್ ಕುಮಾರ್, ಗೌರವಾಧ್ಯಕ್ಷ ವೇದಾರಾಧ್ಯ, ಬಸವರಾಜು.ಎಂ ಹಾಗೂ ಮಾದೇವಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: