ಸುದ್ದಿ ಸಂಕ್ಷಿಪ್ತ

ಡಾ.ಬಿ.ಆರ್.ಅಂಬೇಡ್ಕರ್ 62ನೇ ಪರಿನಿರ್ವಾಣ ದಿನ ನಾಳೆ

ಮೈಸೂರು,ಡಿ.28 : ಪ್ರಗತಿ ಸೇವಾ ಟ್ರಸ್ಟ್, ದಲಿತ ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಸಂವಿಧಾನಶಿಲ್ಪಿ  ಡಾ.ಬಿ.ಆರ್.ಅಂಬೇಡ್ಕರ್ 62ನೇ ಪರಿನಿರ್ವಾಣ ಕಾರ್ಯಕ್ರಮವನ್ನ ನಾಳೆ (29) ಸಂಜೆ 5.30ಕ್ಕೆ ಮಾನದಂದವಾಡಿಯ ಬುದ್ಧ ನಗರದಲ್ಲಿ ಏರ್ಪಡಿಸಲಾಗಿದೆ.

ಉರಿಲಿಂಗಿಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.

ಮೈವಿವಿಯ ಡಾ.ಬಿ.ಪಿ.ಮಹೇಶ್ಚಂದ್ರಗುರು, ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಸದಸ್ಯ ಭುವನೇಶ್ವರಿ ಪ್ರಭುಮೂರ್ತಿ ಇನ್ನಿತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: