ಮೈಸೂರು

ಮೈಸೂರು ನಗರ ಪೊಲೀಸರಿಂದ “ Operation Hawk”  ನಗರದ ಎಲ್ಲಾ ಲಾಡ್ಜ್ ಮತ್ತು ಹೋಟೆಲ್‍ಗಳ ದಿಢೀರ್ ತಪಾಸಣೆ

ಮೈಸೂರು,ಡಿ.28:- ಮೈಸೂರು ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ನಗರದ ಎಲ್ಲಾ ಲಾಡ್ಜ್ ಮತ್ತು ಹೋಟೆಲ್‍ಗಳ ಮೇಲೆ ದಿಢೀರ್ ತಪಾಸಣೆ ನಡೆಸಿದರು.

ಈ ತಪಾಸಣೆಯನ್ನು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಯೋತ್ಪಾದಕರು, ಸುಪಾರಿ ಕಿಲ್ಲರ್ಸ್, ಗ್ಯಾಂಗ್ಸ್ ಮತ್ತು ವಿದೇಶಿಗರ ಅಕ್ರಮ ವಾಸ್ತವ್ಯ ಮತ್ತು ಇತರೇ ಅಕ್ರಮ ಚಟುವಟಿಕೆಗಳ ಪತ್ತೆಗಾಗಿ ನಡೆಸಲಾಗಿದೆ. ಇದೇ ವೇಳೆ ಲಾಡ್ಜ್ ಮತ್ತು ಹೋಟೆಲ್‍ಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಮಾಲೀಕರು/ವ್ಯವಸ್ಥಾಪಕರು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲಾಯಿತು. ಸುರಕ್ಷತೆಯ

ದೃಷ್ಟಿಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆಗಳನ್ನು ಸಹ ನೀಡಲಾಯಿತು. ಹಾಗೂ ಹೋಟಲ್ / ಲಾಡ್ಜ್ ಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆಯೂ ಸಹ ಆದೇಶಿಸಲಾಯಿತು.

ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತರಾದ  ಡಾ. ಎ. ಸುಬ್ರಮಣ್ಯೇಶ್ವರ ರಾವ್ ಸೂಚನೆಯಂತೆ ಡಿ.ಸಿ.ಪಿ. ಡಾ. ವಿಕ್ರಮ್ ಅಮಟೆರವರ ನೇತೃತ್ವದಲ್ಲಿ “ Operation Hawk”   ಎಂಬ ಹೆಸರಿನಡಿ ದಿನವಿಡೀ ಒಟ್ಟು 300 ಹೋಟೆಲ್/ ಲಾಡ್ಜ್ ಗಳ ತಪಾಸಣೆ ನಡೆಸಿದರು. ಲಾಡ್ಜ್ ಮತ್ತು ಹೋಟೆಲ್‍ಗಳಲ್ಲಿ ಮಾಲೀಕರು / ವ್ಯವಸ್ಥಾಪಕರು ಉದ್ದೇಶಪೂರ್ವಕವಾಗಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದಲ್ಲಿ ಅಂತಹವರ ವಿರುದ್ಧ  ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: