ಮೈಸೂರು

ಜಿ.ಪಂ ಚುನಾವಣೆಗೆ ಸ್ಪರ್ಧಿಸಲು ತವರಿನಿಂದ ಹಣ ತರುವಂತೆ ಪೀಡಿಸಿ ಪತ್ನಿಗೆ ಬೆಂಕಿ ಹಚ್ಚಿದ ಪತಿರಾಯ : ಪತ್ನಿ ಸಾವು

ಸಂತೋಷ್

ಮೈಸೂರು,ಡಿ.20:- ಜಿಲ್ಲಾಪಂಚಾಯತ್  ಚುನಾವಣೆಯಲ್ಲಿ ಸ್ಪರ್ಧಿಸಲು ಹಣಕ್ಕಾಗಿ ಪತಿರಾಯನೋರ್ವ ಪತ್ನಿಗೆ ಕಿರುಕುಳ ನೀಡಿ, ಬೆಂಕಿ ಹಚ್ಚಿದ್ದು ಪತ್ನಿ ಸಾವನ್ನಪ್ಪಿದ ಘಟನೆ ಕೆ.ಆರ್.ನಗರ ತಾಲೂಕು ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕಾವ್ಯಾರಾಣಿ (28) ಎಂದು ಗುರುತಿಸಲಾಗಿದೆ. ಗಂಡ ಸಂತೋಷ್,ಅತ್ತೆ, ನಾದಿನಿ ಹಾಗೂ ನಾದಿನಿಯಗಂಡ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಎರಡು ವರ್ಷಗಳ ಹಿಂದೆ ನಾಟನಹಳ್ಳಿಯ ಸಂತೋಷ್ ನನ್ನು  ಮಿರ್ಲೆ ಗ್ರಾಮದ ಕಾವ್ಯಾರಾಣಿ ವಿವಾಹವಾಗಿದ್ದರು. ಸಂತೋಷ್ ಕಾಂಗ್ರಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ. ಮುಂಬರುವ ಜಿಲ್ಲಾಪಂಚಾಯತ್  ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ. ಚುನಾವಣೆ ಖರ್ಚಿಗೆ ತವರು ಮನೆಯಿಂದ 15 ಲಕ್ಷ ತರುವಂತೆ ಕಾವ್ಯಾರಾಣಿಗೆ ಒತ್ತಡ ಹೇರಿದ್ದ. ಆದರೆ ಹಣ ತರಿಸಿಕೊಡಲು ಕಾವ್ಯಾರಾಣಿ ವಿಫಲರಾಗಿದ್ದರು. ಇದರಿಂದ ಕಾವ್ಯಾರಾಣಿಗೆ ಸಂತೋಷ್ ಮನೆಯವರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದರು ಎನ್ನಲಾಗಿದೆ. ಹಣನೀಡದ ಹಿನ್ನೆಲೆಯಲ್ಲಿ ನಿನ್ನೆ  ಕಾವ್ಯಾರಾಣಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸುಟ್ಟಗಾಯಗಳಿಂದ ನರಳುತ್ತಿದ್ದ ಕಾವ್ಯಾರಾಣಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಸಾವಿಗೆ ಮುನ್ನ ಗಂಡ ಸಂತೋಷ್,  ಅತ್ತೆ ಶಾರದಮ್ಮ, ನಾದಿನಿ ಸೌಮ್ಯ ಹಾಗೂ ಸೌಮ್ಯ ಗಂಡ ಚಂದ್ರಶೇಖರ್ ಬೆಂಕಿ ಹಚ್ಚಿದ್ದಾಗಿ ಕಾವ್ಯಾರಾಣಿ ಹೇಳಿಕೆ ನೀಡಿದ್ದಾರೆ.

ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: