ಮೈಸೂರು

ಶಿವಪಂಚಾಕ್ಷರಿ ಲೇಖನ ಸಾಂಗತ ಯಜ್ಞ, ಮಹಾರುದ್ರ, ಶತಚಂಡಿಕಾ ಯಾಗ; ಜ16 ರಿಂದ 22ರವರೆಗೆ

ಚಾಮುಂಡಿಪುರಂ ಶ್ರೀರಾಮಸೇವಾ ಮಂಡಲಿಯೂ ಶಿವಪಂಚಾಕ್ಷರೀ ಲೇಖನ ಸಾಂಗತ ಯಜ್ಞ, ಮಹಾರುದ್ರ ಮತ್ತು ಶತಚಂಡಿಕಾ ಯಾಗವನ್ನು ಸಂಸ್ಥೆಯ 60ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಯೋಜಕ ಎಸ್. ಪ್ರಸನ್ನಪ್ರಕಾಶ್ ತಿಳಿಸಿದರು.

ಅವರು, ಜ.16ರಂದು ಬೆಳಗ್ಗೆ ಮಹರ್ಷಿ ಪಬ್ಲಿಕ್ ಶಾಲಾ ಆವರಣದಲ್ಲಿ ಬೆಳಿಗ್ಗೆ 9.30ಕ್ಕೆ ಗಣಪತಿ ಪೂಜೆ, ಪುಣ್ಯಾಹವಾಚನ, ಕಳಶ ಸ್ಥಾಪನೆ ಸೇರಿದಂತೆ ಹಲವಾರು ವೈದಿಕ ಕಲಾಪಗಳು ಜರುಗುವವು. ಸಂಜೆ 6ಕ್ಕೆ ಉದಕಶಾಂತಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ ಕಲಾಪಗಳು, ನಡೆಯಲಿದ್ದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜೀ, ಗಣಪತಿ ಸಚ್ಚಿದಾನಂದಾಶ್ರಮದ ದತ್ತವಿಜಯಾನಂದತೀರ್ಥ ಸ್ವಾಮೀಜಿ, ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ಆತ್ಮಜ್ಞಾನಂದಜೀ ಅಧ್ಯಕ್ಷತೆ ವಹಿಸುವರು.

ಆಧ್ಯಾತ್ಮಿಕ ಚಿಂತಕಿ ಡಾ.ವಿ.ಬಿ.ಆರತೀ , ಮಾಜಿ ಸಚಿವ ಎಸ್.ಎ.ರಾಮದಾಸ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತ ಉಪಾಧ್ಯಕ್ಷ ಎಚ್.ವಿ.ರಾಜೀವ್, ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ, ಮಾಜಿ ಶಾಸಕ ಬಾಲರಾಜ್ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಜ.20ರಂದು ಶೋಭಾಯಾತ್ರೆ :

ಸಂಜೆ 5:30ಕ್ಕೆ ಶಿವಪಾರ್ವತಿ ಹಾಗೂ ಸೀತಾರಾಮರ ಉತ್ಸವ ಹಾಗೂ ವಿವಿಧ ದೇವತೆಯರ ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ, ಸಂತ-ದರ್ಶನ, ಧರ್ಮಸಂಸತ್, ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ನಡೆಯಲಿದೆ. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಆದಿಚುಂಚನಗಿರಿಮಠದ ನಿರ್ಮಲಾನಂದನಾಥ ಸ್ವಾಮಿಜೀ ಉದ್ಘಾಟಿಸುವರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಿಕ್ಸೂಚಿ ಭಾಷಣ ಮಾಡುವರು ಎಂದು ತಿಳಿಸಿದರು.

ಮಾಜಿ ಸಚಿವ ಎಸ್.ಎ. ರಾಮದಾಸ್, ಶ್ರೀರಾಮ ಸೇವಾ ಮಂಡಲಿ ಎಚ್.ವಿ.ರಾಜೀವ್, ಉಪಾಧ್ಯಕ್ಷ ಡಿ.ಟಿ.ಪ್ರಕಾಶ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

comments

Related Articles

error: